ಎಂಟು ವರ್ಷದ ಬಳಿಕ ತವರಿಗೆ ಮರಳಿದ ಜಿಂಕು

Share

Advertisement
Advertisement
Advertisement

ಉಡುಪಿ:ಕಳೆದ ನಾಲ್ಕು ತಿಂಗಳ ಹಿಂದೆ ಕುಂದಾಪುರ ತಾಲೂಕಿನ ತ್ರಾಸಿ,ಮುಳ್ಳಿಕಟ್ಟೆ ಪರಿಸರದಲ್ಲಿ ಅಡ್ಡಾಡುತ್ತಿದ್ದ ಉತ್ತರ ಪ್ರದೇಶದ ಮೆಹದಾವಲ್ ಜಿಲ್ಲೆ ನಿವಾಸಿ ಮಾನಸಿಕ ಅಸ್ವಸ್ಥ ಜಿಂಕು (ಸುನಿಲ್) ಎಂಬಾತ ಯುವಕ ಮಂಜೇಶ್ವರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖ ಗೊಂಡು ಎಂಟು ವರ್ಷದ ಬಳಿಕ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾನೆ.
ಘಟನೆ ವಿವರ:ಜನವರಿ.25 ರಂದು ತ್ರಾಸಿ ಬೀಚ್ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಕೈಯಲ್ಲಿ ಒಂದು ಚೀಲ ಹಿಡಿದುಕೊಂಡು ಹರಿದ ಬಟ್ಟೆ ಧರಿಸಿದ ಮಾನಸಿಕ ಅಸ್ವಸ್ಥನೊಬ್ಬನು ನಡೆದು ಕೊಂಡು ಬರುತ್ತಿರುವುದನ್ನು ಸಮಾಜ ಸೇವಕ ಎಮ್.ಎಚ್ ಇಬ್ರಾಹಿಂ ಗಂಗೊಳ್ಳಿ ಗಮನಿಸಿದ್ದಾರೆ.ಸಂಜೆ ಅದೆ ವ್ಯಕ್ತಿ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿತ್ರಣಗೊಂಡು ಕುಳಿತಿರುದನ್ನು ಮತ್ತೆ ಗಮನಿಸಿದಾಗ ಯುವಕನನ್ನು ವಿಚಾರಿಸಲಾಗಿದೆ.ಹಿಂದಿಯಲ್ಲಿ ಅಸ್ಪಷ್ಟವಾಗಿ ಮಾತನಾಡುತ್ತಿದ್ದ ಆತನು ತನ್ನ ಹೆಸರು ಸುನಿಲ್ ಎಂದು ಗುರುತಿಸಿಕೊಂಡಿದ್ದಾನೆ.ಯುವಕನಿಗೆ ಪುನರ್ ಜೀವನ ಕಟ್ಟಿಕೊಡುವ ಉದ್ದೇಶದಿಂದ ಸ್ನೇಹಾಲಯ ಸಂಸ್ಥಾಪಕರಾದ ಜೋಸೆಫ್ ಕ್ರಾಸ್ತಾರವರ ಮಾರ್ಗದರ್ಶನದೊಂದಿಗೆ ಗಂಗೊಳ್ಳಿ ಪೆÇಲೀಸ್ ಠಾಣೆ ಸಹಕಾರವನ್ನು ಪಡೆದುಕೊಂಡ ಇಬ್ರಾಹಿಂ ಗಂಗೊಳ್ಳಿ ಅವರು ತನ್ನ ಸ್ನೇಹಿತರ ಜತೆಗೂಡಿ ತಮ್ಮ ಆಂಬ್ಯುಲೆನ್ಸ್‍ನಲ್ಲಿ ಯುವಕನನ್ನು ಮಂಜೇಶ್ವರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ದಾಖಲು ಮಾಡಿದ್ದರು.ನಾಲ್ಕು ತಿಂಗಳ ಆರೈಕೆ ಬಳಿಕ ಜಿಂಕು (ಸುನಿಲ್) ಸಂಪೂರ್ಣವಾಗಿ ಮಾನಸಿಕ ರೋಗದಿಂದ ಗುಣಮುಖಗೊಂಡು ಸಹಜ ಜೀವನಕ್ಕೆ ಮರಳಿದ್ದರು.ಮುಂಬೈ ಶೃದ್ಧಾ ಕೇಂದ್ರದ ಸಿಬ್ಬಂದಿಗಳ ಕಠಿಣ ಪರಿಶ್ರಮದಿಂದ ಆತನ ವಿಳಾಸವನ್ನು ಪತ್ತೆ ಹಚ್ಚಿ ಮೇ.13 ರಂದು ಹೆತ್ತವರ ಮಡಿಲಿಗೆ ಸೇರಿಸಲಾಗಿದೆ.
ಪ್ರೇಮ ವೈಪಲ್ಯವೆ ಮಾನಸಿಕತೆಗೆ ಕಾರಣ:ಉತ್ತರ ಪ್ರದೇಶ ಮೆಹದಾವಲ್ ಜಿಲ್ಲೆ ಬಡ ಕುಟುಂಬದ ನಿವಾಸಿ ಜಿಂಕು ತನ್ನ ಹುಟ್ಟೂರಲ್ಲಿ ಸೈಕಲ್ ಮ್ಯಾಕಾನಿಕ್ ಕೆಲಸವನ್ನು ಮಾಡಿಕೊಂಡಿದ್ದಾನು.ಪ್ರೇಮ ವೈಪಲ್ಯದಿಂದ ಮಾನಸಿಕಗೊಂಡ ಆತನು ಅಲ್ಲಿಂದ ನಾಪತ್ತೆಯಾಗಿದ್ದಾನೆ.ಎಷ್ಟೆ ಹುಡುಕಾಟ ನಡೆಸಿದ್ದರು ಮಗನು ಪತ್ತೆಯಾಗದೆ ಇರುವುದರಿಂದ ಹೆತ್ತವರು ಬಹಳಷ್ಟು ನೊಂದುಕೊಂಡಿದ್ದರು.ಸತತ ಎಂಟು ವರ್ಷದ ಬಳಿಕ ಜಿಂಕು ಮರಳಿ ತನ್ನ ಕುಟುಂಬಿಕರನ್ನು ಮತ್ತೆ ಸೇರಿಕೊಂಡಿರುವುದರಿಂದ ಹೆತ್ತವರ ಮೊಗದಲ್ಲಿ ಮಂದಹಾಸ ಮೂಡಿದೆ.ಒಂದು ಪ್ರೇಮ ಕಥೆ ಜಿಂಕವನ್ನು ಮಾನಸಿಕ ರೋಗಕ್ಕೆ ಬಲಿಯಾಗುವಂತೆ ಮಾಡಿರುವುದು ಮಾತ್ರವಲ್ಲದೆ ಎಂಟು ವರ್ಷಗಳಿಂದ ಊರೂರು ಸುತ್ತುವಂತೆ ಮಾಡಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page