ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮೂಡುಮಠ:ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Share

Advertisement
Advertisement
Advertisement

ಕುಂದಾಪುರ:ಮೂಡುಮಠ ಉಳ್ಳೂರು 11 ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಶ್ರೀಗೋಪಾಲ ಕೃಷ್ಣ ದೇವರಿಗೆ ತುಳಸಿ ಅರ್ಚನೆ,ಹಣ್ಣು ಕಾಯಿ ಮತ್ತು ಮಂಗಳಾರತಿ ಸೇವೆ,ಅನ್ನಸಂತರ್ಪಣೆ ಸೇವೆಯನ್ನು ನೆರವೇರಿಸಲಾಯಿತು
ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುದ್ದು ಕೃಷ್ಣ ಸ್ಪರ್ಧೆ,ಪುರುಷ ಹಾಗೂ ಮಹಿಳೆಯರಿಂದ ಮೊಸರು ಕುಡಿಕೆ,ಭಜನಾ ಕಾರ್ಯಕ್ರಮ,ಭಕ್ತಿ ಗೀತೆ,ನೃತ್ಯ ಕಾರ್ಯಕ್ರಮ ಜರುಗಿರು.ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.ದಾನಿಗಳನ್ನು ಗೌರವಿಸಲಾಯಿತು.ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ ವೇಷ ತೊಡಿಸಿ ಸಂಭ್ರಮಿಸಿದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಮಾತನಾಡಿ,ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ದಾನಿಗಳು ಹಾಗೂ ಊರಿನವರ ಸಹಕಾರದಿಂದ ವಿಜೃಂಭಣೆಯಿಂದ ಸಂಪನ್ನಗೊಂಡಿದೆ.ದೇವಸ್ಥಾನದ ಅಭಿವೃದ್ಧಿಗೆ ಎಲ್ಲರು ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಸೂಲಿಯಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ,ಮೂಡು ಮಠ ದೇವಸ್ಥಾನದಲ್ಲಿ ಹಲವಾರು ವರ್ಷಗಳಿಂದ ಪೂಜಾ ಕೈಂಕರ್ಯಗಳನ್ನು ಸಂಪ್ರದಾಯ ರೀತಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.ಕಳೆದ ಮೂರು ವರ್ಷಗಳಿಂದ ಯುವಕರ ತಂಡದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ.ಮುಂದಿ ದಿನಗಳಲ್ಲಿ ಊರಿನವರ ಸಹಕಾರದಿಂದ ಮುಂದುವರೆಯುವಂತೆ ಆಗಲಿ ಎಂದು ಶುಭಹಾರೈಸಿದರು.
ದಿನೇಶ್ ಆಚಾರ್ಯ ಮಾತನಾಡಿ,ಕಳೆದ ಮೂರು ವರ್ಷಗಳಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ದೇವಸ್ಥಾನದಲ್ಲಿ ಆಚರಣೆಯನ್ನು ಮಾಡುತ್ತಾ ಬರಲಾಗುತ್ತಿದೆ.ಶ್ರೀ ದೇವರ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದ ದಾನಿಗಳಿಗಳೂ,ಗ್ರಾಮಸ್ಥರಿಗೂ ಧನ್ಯವಾದವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ
ಗೋಪಾಲ್ ಉಡುಪ ಮೂಡ್ಮಠ,ಸೀತಾರಾಮ ಶೆಟ್ಟಿ, ಉದ್ದಿನ ಹಕ್ಲು, ದುರ್ಗಿ ಎಸ್ ಮುಖ್ಯೋಪಾಧ್ಯಾಯರು ಸ.ಹಿ.ಪ್ರಾ ಶಾಲೆ ಉಳ್ಳೂರು 11, ಗೋಪಾಲ ಪೂಜಾರಿ ಪಡುಮನೆ, ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ ಉಳ್ಳೂರು11, ಮಂಜುನಾಥ ಗಾಣಿಗ ಕೆರೆಗೆದ್ದೆಮನೆ
ಸಮಿತಿ ಸದಸ್ಯರು,ಅರ್ಚಕರು,ಗ್ರಾಮಸ್ಥರು, ದಾನಿಗಳು ಉಪಸ್ಥಿತರಿದ್ದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಸಹಕರಿಸಿದವರು:ಅನ್ನದಾನ ಸೇವಾಕರ್ತರು ದಿ.ನಾರಾಯಣ ಗಾಣಿಗ ಸ್ಮರಣಾರ್ಥ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು, ಬಹುಮಾನದ ಪ್ರಾಯೋಜಕರು ಎಸ್ ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷರು ಕಂಭದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ,ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನವನ್ನು ನೀಡಿದವರು ದಿ.ರಘುರಾಮಶೆಟ್ಟಿ ಅವರ ಸ್ಮರಣಾರ್ಥ ಚಂದ್ರೇಶ ಶೆಟ್ಟಿ ಸನಾತನ ಉಳ್ಳೂರು,ರಾತ್ರಿ ಫಲಹಾರದ ವ್ಯವಸ್ಥೆ ಮಾಡಿದವರು ಭುಜಂಗಶೆಟ್ಟಿ ಕೂಕನಾಡು,ಹೂವಿನ ಅಲಂಕಾರ ಗೋಪಾಲ ಪೂಜಾರಿ ಪಡುಮನೆ,ಪೂಜಾ ಸಾಮಗ್ರಿ ನೀಡಿದವರು ಸೀತಾರಾಮ ಶೆಟ್ಟಿ ಉದ್ದಿನ ಹಕ್ಕಲು,ಸ್ಮರಣಿಕೆಯನ್ನು ನೀಡಿದವರು ಸೀತಾರಾಮ ಬಿಲ್ಲವ ಗುಡಾಡಿ,ಪ್ರಶಸ್ತಿ ಪತ್ರ ಪ್ರದೀಪ್ ಕುಮಾರ್ ಶೆಟ್ಟಿ ದೊಡ್ಮನೆ,ದೇವಸ್ಥಾನದ ಗರ್ಭಗುಡಿಗೆ ಬಣ್ಣವನ್ನು ನೀಡಿದವರು ಸಮರ ಶೆಟ್ಟಿ ಅಧ್ಯಕ್ಷರು ಲಯನ್ಸ್ ಕ್ಲಬ್ ನಾವುಂದ,ವೇದಿಕೆ ಅಲಂಕಾರ ಗಣೇಶ್ ದೇವಾಡಿಗ ಹಾಡಿಮನಿ ಹಾಗೂ ರಾಘವೇಂದ್ರ ಶೆಟ್ಟಿ ನಾರ್ಕಳಿ ಮನೆ,ಮುದ್ರಣ ವೆಚ್ಚ ಸುಜಾತಾ ರತ್ನಾಕರ ಶೆಟ್ಟಿ ಕಾಡೇರಿ.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page