ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ವಾರ್ಷಿಕೋತ್ಸವ,ಫ್ಯಾಷನ್ ಶೋ ಕಾರ್ಯಕ್ರಮ

Share

Advertisement
Advertisement
Advertisement

ಉಡುಪಿ:ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಮತ್ತು ಫ್ಯಾಷನ್ ಶೋ ಕಾರ್ಯಕ್ರಮ ಬ್ರಹ್ಮವಾರ ಮದರ್ ಪ್ಯಾಲೆಷ್ ಸಭಾಂಗಣದಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು.
ಕಾಲೇಜಿನ ವಾರ್ಷಿಕೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಫ್ಯಾಷನ್ ಶೋ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.
ವಿದ್ಯಾರ್ಥಿಗಳು ನವ ಬಗೆಯ ದಿರಿಸುಗಳನ್ನು ತೊಟ್ಟು ಸಂಭ್ರಮಿಸಿದರು.ಆಕರ್ಷಕ ಉಡುಗೆ ತೊಡುಗೆಗಳು ಎಲ್ಲರ ಗಮನ ಸೆಳೆಯಿತು.
ಫ್ಯಾಷನ್ ಡಿಸೈನ್ ವಿದ್ಯಾರ್ಥಿಗಳು ತಾವು ತಯಾರಿಸಿದ ಉಡುಗೆಗಳನ್ನು ರ್ಯಾಂಪ್ ನಲ್ಲಿ ಪ್ರದರ್ಶಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದರು.
ಕೋಸ್ಟಲ್ ವುಡ್ ನ ಪ್ರಸಿದ್ಧ ನಟ ಮತ್ತು ಕಲಾವಿದರಾದ ಅರವಿಂದ ಬೋಳಾರ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ,
ಗಂಡು ಕಲಿಯುವುದು ಜಾಸ್ತಿ
ಹೆಣ್ಣು ನಲಿಯುವುದು ಜಾಸ್ತಿ ಎನ್ನುವ ನಾಣ್ಣುಡಿ ಇದೆ ಅದಕ್ಕೆ ಅಪವಾದ ಎನ್ನುವಂತೆ ಇಂದು ಮಹಿಳೆಯರು ಕ್ರೀಡೆ, ಸಾಮಾಜಿಕ,ರಾಜಕೀಯ ಸಾಂಸ್ಕೃತಿಕ ಶೈಕ್ಷಣಿಕ ರಂಗ ಸೇರಿದಂತೆ ಎಲ್ಲಾ ಎಲ್ಲಾ ರಂಗಗಳಲ್ಲೂ ಮುಂದೆ ಇದ್ದಾರೆ ಇದು ಸಾಮಾಜಿಕ ಬೆಳವಣಿಗೆ ಮುಖ್ಯ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮಿಂದ ಯಾವುದೂ ಆಗುವುದಿಲ್ಲ ಎಂದು ತಿಳಿದರೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ.ಧೈರ್ಯದಿಂದ ಮುನ್ನೆಡೆದರೆ ಮಾತ್ರ ಗೆಲುವನ್ನು ಕಾಣಬಹುದಾಗಿದೆ.ನಮ್ಮಲ್ಲಿ ಆತ್ಮಸ್ಥೈರ್ಯ ಸದಾ ತುಂಬಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಿದರು.
ವಿದ್ಯಾ ಸಂಸ್ಥೆ ಕೊಟ್ಟಿರುವ ವಿದ್ಯೆ ಎಲ್ಲರಿಗೂ ದೊರಕಲಿ ಎಂದು ಶುಭಾ ಹಾರೈಸಿದರು.
ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾದ ಸುಬ್ರಹ್ಮಣ್ಯ ಮಾತನಾಡಿ,
ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಈ ಹಿಂದೆ ಉನ್ನತ ಶಿಕ್ಷಣ ಎನ್ನುವುದು ಕನಸಿನ ಮಾತಾಗಿತ್ತು.ಬದಲಾದ ಕಾಲ ಮಾನದಲ್ಲಿ ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆತ್ತಿದ್ದರಿಂದ ಉನ್ನತ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದ್ದು ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದ ವಿದ್ಯಾ ಲಕ್ಷ್ಮೀ ಎನ್ನುವ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬಡ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ.ಗುಣ ಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿನಿ
ಐಶ್ವರ್ಯ ರವಿ ನಾಯಕ್ ಮಾತನಾಡಿ,ಕಾಲೇಜಿನ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಫ್ಯಾಷನ್ ಶೋ ವಿದ್ಯಾರ್ಥಿಗಳಿಗೆ ಒಳ್ಳೆ ಅನುಭವವನ್ನು ತಂದು ಕೊಟ್ಟಿದೆ ಎಂದರು.
ಫ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿ ದೀಪಾ ಶ್ರೀ ಮಾತನಾಡಿ,ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ
ಫ್ಯಾಷನ್ ಶೋ ಮತ್ತು ರ್ಯಾಂಪ್ ಶೋ ಆಯೋಜನೆ ಮಾಡಲಾಗಿದ್ದು,ವಿವಿಧ ಬಗೆಯ ವಿನ್ಯಾಸದ ಉಡುಪುಗಳನ್ನು ಪ್ರದರ್ಶಿಸಲಾಗಿದೆ,ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ವಿದ್ಯಾರ್ಥಿನಿ
ಮಹೀಮಾ ಶೆಟ್ಟಿ ನಾವುಂದ ಮಾತನಾಡಿ,
ವಿದ್ಯಾಲಕ್ಷ್ಮೀ ಶಿಕ್ಷಣ ಸಂಸ್ಥೆಯಲ್ಲಿ
ಶಿಕ್ಷಣದಷ್ಟೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ.
ಕ್ಯಾಂಪಸ್ ಇಂಟ್ರೀವ್ ನಲ್ಲಿ ನನಗೆ ಕೆಲಸ ಸಿಕ್ಕಿದೆ.ನನ್ನ ಭವಿಷ್ಯದ ನೆಲೆಗೆ ಅವಕಾಶ ಕಲ್ಪಿಸಿದ ಕಾಲೇಜಿನ ಆಡಳಿತ ಮಂಡಳಿಗೆ ಧನ್ಯವಾದವನ್ನು ಸಲ್ಲಿಸುತ್ತೀದ್ದೇನೆ ಎಂದರು.
ಕಾಲೇಜಿನ ನಿರ್ದೇಶಕಿ ಮಮತಾ,ವೈಸ್ ಪ್ರಿನ್ಸಿಪಾಲ್ ಸುಜಾತಾ,ಸಾಂಸ್ಕೃತಿಕ ಸಂಚಾಲಕಿ ರಜಿಕಾ ಉಪಸ್ಥಿತರಿದ್ದರು.
ಅನ್ಸಿಟಾ ಸ್ವಾಗತಿಸಿದರು.ವಾಣಿಜ್ಯ ಉಪನ್ಯಾಸಕಿ ಸ್ವಾತಿ ನಿರೂಪಿಸಿದರು.ಷೌಪ್ಯ ವಂದಿಸಿದರು.ಕನ್ನಡ ಉಪನ್ಯಾಸಕಿ ಅನುಪಮ ಭಟ್ ಸಹಕರಿಸಿದರು.

oplus_0
Advertisement


Share

Leave a comment

Your email address will not be published. Required fields are marked *

You cannot copy content of this page