ಕ್ರಿಶ್ಚಿಯನ್ ಬಾಂಧವರಿಂದ ತೆನೆ ಹಬ್ಬ ಆಚರಣೆ

ಕುಂದಾಪುರ:ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಚರ್ಚ್ ಮತ್ತು ತ್ರಾಸಿ ಇಗರ್ಜಿ ಹಾಗು ಪಡುಕೋಣೆ ಚರ್ಚ್,ತಲ್ಲೂರು ಚರ್ಚ್ ಸೇರಿದಂತೆ ನಾನಾ ಕಡೆಗಳಲ್ಲಿ ತೆನೆ ಹಬ್ಬ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ನಡೆಯಿತು.ಚರ್ಚಿನ ಧರ್ಮಗುರುಗಳು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು,ಕ್ರಿಶ್ಚಿಯನ್ ಬಾಂಧವರು ಚರ್ಚ್‍ಗೆ ಆಗಮಿಸಿ ಪ್ರಾರ್ಥನೆಯನ್ನು ಸಲ್ಲಿಸಿದರು.ಭಕ್ತರಿಗೆ ತೆನೆಯನ್ನು ವಿತರಿಸಲಾಯಿತು.