ಮುಳ್ಳಿಕಟ್ಟೆ-ಆಲೂರು ಮುಖ್ಯ ರಸ್ತೆಗೆ ಅಭಿವೃದ್ಧಿ ಭಾಗ್ಯ

ಕುಂದಾಪುರ:ಸಂಪೂರ್ಣವಾಗಿ ಹದಗೆಟ್ಟು ಹೋಗಿರುವ ಮುಳ್ಳಿಕಟ್ಟೆ-ಆಲೂರು ಜಿಲ್ಲಾ ಮುಖ್ಯ ರಸ್ತೆಗೆ ಕೊನೆಗೂ ಅಭಿವೃದ್ಧಿ ಭಾಗ್ಯ ಕೂಡಿ ಬಂದಿದೆ.ರಸ್ತೆ ಅಭಿವೃದ್ಧಿ ಕಾರ್ಯ ಬರದಿಂದ ಸಾಗುತ್ತಿದ್ದು ಕೆಲಸ ಪ್ರಗತಿಯಲ್ಲಿದೆ.
ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 10.ಕಿ.ಮೀ ದೂರವಿರುವ ಕುಂದಾಪುರ ತಾಲೂಕಿನ ಆಲೂರು-ಮುಳ್ಳಿಕಟ್ಟೆ ಮುಖ್ಯ ರಸ್ತೆ ಹೊಂಡಗುಂಡಿ ಕೂಡಿದ್ದು ವಾಹನ ಸವಾರರಿಗೆ ರಸ್ತೆಯಲ್ಲಿ ಸಂಚರಿಸುವುದೆ ದುಸ್ತರವಾಗಿದ್ದು,ಕಿರಿದಾದ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸಿ ಕೊಂಡು ಹೋಗುವುದೇ ಕಷ್ಟಕರವಾಗಿತ್ತು.ಕಿರಿದಾದ ರಸ್ತೆಯನ್ನು ಸಂಪೂರ್ಣವಾಗಿ ಅಗಲಗೊಳಿಸುವುದರ ಮುಖೇನ ಹದಗೆಟ್ಟ ರಸ್ತೆಯನ್ನು ವಿಶೇಷ ಅನುದಾನದ ಮೂಲಕ ಅಭಿವೃದ್ಧಿಗೊಳಿಸಲಾಗುತ್ತಿದೆ.ರಸ್ತೆ ಅಭಿವೃದ್ಧಿ ಕಾರ್ಯದಿಂದ ವಾಹನ ಸವಾರರು ನಿಟ್ಟುಸಿರು ಬೀಡುವಂತಾಗಿದೆ.