ಮರವಂತೆ:ಡಿವೈಡರ್ ಏರಿದ ಬಸ್,ವಿದ್ಯುತ್ ಕಂಬಕ್ಕೆ ಡಿಕ್ಕಿ

ಕುಂದಾಪುರ:ಕೇರಳದಿಂದ ದಾಂಡೇಲಿ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಟೂರಿಸ್ಟ್ ಬಸ್ ಬೈಂದೂರು ತಾಲೂಕಿನ ಮರವಂತೆ ಕೇಶವ ಬೊಬ್ಬರ್ಯ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ಬೆಳಗಿನ ಜಾವಾ 5.30 ರ ಸುಮಾರಿಗೆ ನಿಯಂತ್ರಣ ಕಳೆದು ಕೊಂಡು ಡಿವೈಡರ್ ಮಧ್ಯ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಎರಡು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು,ಬಸ್ಸಿನ ಮುಂಭಾಗ ಜಖಂ ಗೊಂಡಿದೆ.ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.ಅಪಘಾತದ ರಭಸಕ್ಕೆ ಬುಡ ಸಮೇತ ಕಿತ್ತು ಬಂದಿದ್ದ ವಿದ್ಯುತ್ ಕಂಬ ಬಸ್ಸಿನ ಮುಂಭಾಗದಲ್ಲಿ ಸಿಲುಕಿ ಕೊಂಡಿತ್ತು.