ಭಾರತೀಯರಿಗೆ ಪ್ರಜ್ಞಾನಂದ ವಿಶ್ವ ಚಾಂಪಿಯನ್:ರನ್ನರ್ ಅಪ್ ಪ್ರಶಸ್ತಿಗೆ ಅಪ್ಪುಗೆ
ಬೆಂಗಳೂರು:ಚೆಸ್ ವಿಶ್ವಕಪ್ ಚಾಂಪಿಯನ್ ಶಿಪ್‍ನಲ್ಲಿ ಭಾರತೀಯ ಯುವ ತಾರೆ 18 ವರ್ಷದ ಪ್ರಜ್ಞಾನಂದ ಅವರು ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‍ಸೆನ್ ಅವರೊಂದಿಗೆ ಆಡಿದ ರಣರೋಚಕ ಫೈನಲ್ ಪಂದ್ಯಾಟದಲ್ಲಿ ಸೋಲುದರ ಮುಖೇನ ರನ್ನರ್ ಅಪ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
ಚೆಸ್ ವಿಶ್ವಕಪ್ ಪಂದ್ಯಾಟದಲ್ಲಿ ಘಟಾನುಗಟಿ ಆಟಗಾರರಿಗೆ ಸೋಲಿನ ಅನುಭವದ ರುಚಿ ತೋರಿಸಿದ ಭಾರತದ ಯುವ ಚೆಸ್ ಆಟಗಾರ ಫೈನಲ್‍ಗೆ ಎಂಟ್ರಿ ಕೊಡುವುದರ ಮುಖೇನ ಭಾರತೀಯರ ನಿದ್ದೆಗೆಡಿಸಿದ್ದರು.ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‍ಸೆನ್ ಅವರ ಜತೆ ಆಡಿದ ಫೈನಲ್ ಪಂದ್ಯದಲ್ಲಿ ರೋಚಕ ಸೋಲನ್ನು ಕಂಡಿದ್ದರು.ಚೆಸ್ ಕ್ಷೇತ್ರದಲ್ಲಿ ಭರವಸೆಯನ್ನು ಮುಡಿಸಿರುವ ಯುವ ಆಟಗಾರ ಪ್ರಜ್ಞಾನಂದ ಭಾರತೀಯರ ಪಾಲಿಗೆ ವಿಶ್ವ ಚಾಂಪಿಯನ್ ಆಗಿದ್ದಾರೆ.



















































































































































































































































































































































































































































































































































































































































































































































































































































































































































































































































































































































































































































































































































































































































































