ಲಿಯಾ ಜೌಟ್‍ಲೆಟ್ ಕೋಟೇಶ್ವರದಲ್ಲಿ ಶುಭಾರಂಭ

Share

Advertisement
Advertisement
Advertisement

ಕುಂದಾಪುರ:ಭಾರತದಲ್ಲಿ ಮೊದಲ ಬಾರಿಗೆ ಇಸ್ರೇಲಿನ ಪ್ರಸಿದ್ಧ ಹೆಟ್ರಾ ಉತ್ಪನ್ನಗಳ ಲಿಯಾ ಔಟ್‍ಲೆಟ್ ನೂತನ ಮಳಿಗೆ ಶುಭಾರಂಭ ಕಾರ್ಯಕ್ರಮ ಕುಂದಾಪುರ ತಾಲೂಕಿನ ಕೋಟೇಶ್ವರದ ಬೈಪಾಸ್ ಸಮೀಪ ಇರುವ ಸನ್ವಿಜಯ್ ಪರ್ಲ್ ಕಟ್ಟಡದಲ್ಲಿ ಭಾನುವಾರ ನಡೆಯಿತು.
ಇಸ್ರೇಲ್ ದೇಶದಲ್ಲಿ ತಯಾರಿಸಲ್ಪಡುವ ಬಹು ಬೇಡಿಕೆ ಮತ್ತು ಉತ್ತಮ ಗುಣಮಟ್ಟದ ಸನೋ ಉತ್ಪನ್ನಗಳು ಕೋಟೇಶ್ವರದ ಲಿಯಾ ಜೌಟ್‍ಲೆಟ್ ಮಳಿಗೆಯಲ್ಲಿ ದೊರಕಲಿದೆ.ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗೆ ಭೇಟಿ ನೀಡುವುದರ ಮುಖೇನ ನವ ಉದ್ಯಮವನ್ನು ಪ್ರೋತ್ಸಾಹಿಸ ಬೇಕಾಗಿದೆ.
ಉದ್ಯಮಿ ಅಭಿನಂಧನ್ ಶೆಟ್ಟಿ ಅವರು ಉತ್ಪನ್ನಗಳನ್ನು ಬಿಡುಗಡೆಗೊಳಿಸಿ ಮಾತನಾಡಿ,ಇಸ್ರೇಲ್ ದೇಶದಲ್ಲಿ ನಿರ್ಮಿತಗೊಳ್ಳುವ ಗುಣಮಟ್ಟದ ಉತ್ಪನ್ನಗಳು ನಮ್ಮಲ್ಲಿ ದೊರೆಯುತ್ತಿರುವುದು ಬಹಳಷ್ಟು ಖುಸಿ ಕೊಡುವಂತಹ ವಿಚಾರವಾಗಿದೆ.ಬಹು ರಾಷ್ಟ್ರೀಯ ಕಂಪನಿಯ ಮಳಿಗೆ ಕೋಟೇಶ್ವರದಂತಹ ಪ್ರದೇಶದಲ್ಲಿ ಆರಂಭಗೊಂಡಿರುವುದರಿಂದ ಸ್ಥಳೀಯರಿಗೆ ಗ್ರಹ ಬಳಕೆಯ ಒಳ್ಳೆ ರೀತಿಯ ವಸ್ತುಗಳು ಸುಲಭ ರೀತಿಯಲ್ಲಿ ದೊರಕಲಿದೆ ಎಂದು ಹೇಳಿದರು.
ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಔಜ್ಲೆನ್ ರೆಬೆಲ್ಲೊ ಅವರು ಲಿಯಾ ಔಟ್‍ಲೆಟ್ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ,ನವ ಉದ್ಯಮ ಉತ್ತಮವಾದ ರೀತಿಯಲ್ಲಿ ನಡೆಯಲಿ ಎಂದು ಶುಭಹಾರೈಸಿದರು.
ಲಿಯಾ ಜೌಟ್‍ಲೆಟ್ ಎಂ.ಡಿ ಜಿ.ಕೆ ಅವಿನಾಶ ಮಾತನಾಡಿ,ಇಸ್ರೇಲ್ ದೇಶದಲ್ಲಿ ಜನಪ್ರಿಯಗೊಂಡಿರುವ ಸನೋ ಉತ್ಪನ್ನಗಳು ಕೋಟೇಶ್ವರದಲ್ಲಿ ಆರಂಭಗೊಂಡಿರುವ ಲಿಯಾ ಔಟ್‍ಲೆಟ್ ಮಳಿಗೆಯಲ್ಲಿ ದೊರಕಲಿದೆ. ಭಾರತದಲ್ಲಿ ಪ್ರಥಮವಾಗಿ ಇವೊಂದು ಮಳಿಗೆಯನ್ನು ಕೋಟೇಶ್ವರದಲ್ಲಿ ಆರಂಭಿಸಲಾಗಿದ್ದು.ಮುಂದಿನ ದಿನಗಳಲ್ಲಿ ರಾಜ್ಯ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಇತಂತಹ ಮಳಿಗೆಯನ್ನು ಸ್ಥಾಪಿಸುವ ಆಲೋಚನೆಯನ್ನು ಹೊಂದಿದ್ದೇವೆ ಎಂದರು.ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಉದ್ಯಮಿ ದಿನೇಶ್ ಜೋಗಿ ಮಾತನಾಡಿ,ಲಿಯಾಔಟ್ ಲೆಟ್ ಮಳಿಗೆಯನ್ನು ಪ್ರಥಮ ಬಾರಿಗೆ ನಮ್ಮ ಊರಿನಲ್ಲಿ ಆರಂಭಿಸಲಾಗಿದೆ.ಮುಂದಿನ ದಿನಗಳಲ್ಲಿ ಅಮೆಜಾನ್ ಮತ್ತು ಪ್ಲಿಪ್‍ಕಾರ್ಟ್‍ನಲ್ಲಿ ಬಿಡುಗಡೆ ಮಾಡಲಾಗುದು ಎಂದು ಹೇಳಿದರು.ಸ್ಥಳೀಯರು ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿಕೊಂಡರು.
ಸಿಲ್ವಿಯಾ ಡಿಸೋಜ ಮಾತನಾಡಿ,ಉತ್ಪನ್ನಗಳನ್ನು ಸ್ವತಹ ಬಳಕೆ ಮಾಡಲಾಗಿದ್ದು.ಉತ್ತಮವಾಗಿದೆ,100 ಪರ್ಸೆಂಟ್ ಗ್ಯಾರಂಟಿ ಕೂಡ ನೀಡುತ್ತಿದ್ದೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಉದ್ಯಮಿ ಹರೀಶ್ ಜೋಗಿ ಮಾತನಾಡಿ,ನವ ಉದ್ಯಮಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ವಿನ್ಸಿಟ್ಸ್ ಮಾತನಾಡಿ,ಉತ್ಪನ್ನಗಳ ಬಗ್ಗೆ ವಿವರಣೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕೋಟೇಶ್ವರ ಪಂಚಾಯಿತಿ ಅಧ್ಯಕ್ಷೆ ರಾಗಿಣಿ ದೇವಾಡಿಗ,ಕುಂದಾಪುರ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ದೀಪಕ್ ಕುಮಾರ್,ಸಿಇಒ ಸುನೀಲ್,ಫೌಂಡರ್ ವಿಜಯ ಲೋಬೋ, ಉದ್ಯಮಿಗಳು,ಅತಿಥಿಗಳು,ಹಿತೈಷಿಗಳು ಉಪಸ್ಥಿತರಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page