ಕಂಚುಗೋಡು ಸನ್ಯಾಸಿ ಬಲ್ಲೆಯಲ್ಲಿ ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆ
ಕುಂದಾಪುರ:ಮೀನುಗಾರ ಕುಟುಂಬದ ಸದಸ್ಯರೆ ಹೆಚ್ಚಾಗಿ ವಾಸಮಾಡುತ್ತಿರುವ ಇವೊಂದು ಪರಿಸರದಲ್ಲಿ ಅಂಗನವಾಡಿ ಕೇಂದ್ರವನ್ನು ತೆರೆದಿರುವುದರಿಂದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ.ಸ್ವಂತ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ಕಾರ್ಯಚರಣೆ ಮಾಡಬೇಕಾಗಿರುವುದರಿಂದ ಪಂಚಾಯಿತಿ ಕಡೆಯಿಂದ ಎಲ್ಲಾ ರೀತಿಯಿಂದಲೂ ಸಹಕಾರ ನೀಡಲಾಗುವುದು ಎಂದು ಗುಜ್ಜಾಡಿ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಹೇಳಿದರು.
ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿ ಬಲ್ಲೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಅಂಗನವಾಡಿ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗುಜ್ಜಾಡಿ ಪಂಚಾಯಿತಿ ಸದಸ್ಯ ಜನಾರ್ದನ ಪೂಜಾರಿ,ಗಣಪತಿ ಪಟೇಲ್,ಸದಾಶಿವ,ಅಂಗನವಾಡಿ ಶಿಕ್ಷಕಿಯರು,ಗ್ರಾಮಸ್ಥರು,ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.



















































































































































































































































































































































































































































































































































































































































































































































































































































































































































































































































































































































































































































































































































































































































































