ಹಕ್ಲಾಡಿ:ಅಕ್ಷರ ಮಂಟಪ,ದಿ.ಬಾಳೆಮನೆ ಭಾಸ್ಕರ ಶೆಟ್ಟಿ ರಂಗವೇದಿಕೆ ಲೋಕಾರ್ಪಣೆ

Share

Advertisement
Advertisement
Advertisement
https://youtu.be/l5uiy5J4bDo

ಕುಂದಾಪುರ:ಬೈಂದೂರು ವಲಯದ ಹಕ್ಲಾಡಿ ಕೆ.ಎಸ್.ಎಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಸರಕಾರಿ ಪ್ರೌಢಶಾಲೆಯಲ್ಲಿ ದಿ.ಬಾಳೆಮನೆ ಭಾಸ್ಕರ ಶೆಟ್ಟಿ ರಂಗವೇದಿಕೆ ಲೋಕಾರ್ಪಣೆ,ಅಕ್ಷರ ಮಂಟಪ ಸಭಾಂಗಣ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಶನಿವಾರ ನಡೆಯಿತು.

ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ಅಕ್ಷರ ಮಂಟಪ ಹಿರಿಯ ವಿದ್ಯಾರ್ಥಿ ಸಭಾಂಗಣ ಉದ್ಘಾಟಿಸಿ ಮಾತನಾಡಿ,ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸುಸಜ್ಜಿತವಾದ ಅಕ್ಷರ ಮಂಟಪ ನಿರ್ಮಾಣ ಮಾಡಿರುವುದು ಶ್ಲಾಘನೀಯ ಕೆಲಸವಾಗಿದೆ.ನಮ್ಮಲ್ಲಿ ಸಾಮಾಜಿಕ ಕಳಕಳಿ ಜಾಗ್ರತವಾದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಬಾಳೆಮನೆ ದಿ.ಭಾಸ್ಕರ ಶೆಟ್ಟಿ ರಂಗವೇದಿಕೆ ಉದ್ಘಾಟಿಸಿ ಮಾತನಾಡಿ,ಸಾಮಾಜಿಕ ಕಾರ್ಯಗಳ ಮೂಲಕ ಊರಿನ ಅಭಿವೃದ್ಧಿ ಬಗ್ಗೆ ನಿರಂತರವಾಗಿ ಕನಸುಗಳನ್ನು ಕಾಣುತ್ತಿದ್ದ ಬಾಳೆಮನೆ ದಿ.ಭಾಸ್ಕರ ಶೆಟ್ಟಿ ಅವರ ಸವಿನೆನಪಿಗಾಗಿ ರಂಗವೇದಿಕೆಯನ್ನು ನಿರ್ಮಾಣ ಮಾಡಿರುವುದು ಉತ್ತಮವಾದ ಸಾಮಾಜಿಕ ನಡೆಯಾಗಿದೆ.ಜಾತಿ ಭೇದ ಮರೆತು ಒಗ್ಗಟ್ಟಿನಿಂದ ಊರಿನವರು ಸೇರಿಕೊಂಡು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿರುವ ಹಕ್ಲಾಡಿ ಪ್ರೌಢಶಾಲೆ ಉತ್ತಮವಾದ ಹೆಸರನ್ನು ಗಳಿಸಲು ಕಾರಣವಾಗಿದೆ ಎಂದು ಹೇಳಿದರು.

ಹೆಮ್ಮಾಡಿ ಪಂಚಗಂಗಾ ಸೊಸೈಟಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ,ಊರಿನ ಹಿರಿಯ ವ್ಯಕ್ತಿಗಳ ಸಹಕಾರದಿಂದ ಇವೊಂದು ಶಾಲೆ ನಿರ್ಮಾಣವಾಗಿದೆ.ಮಕ್ಕಳಿಗೆ ಪ್ರೌಢಶಾಲಾ ಶಿಕ್ಷಣ ದೊರಕಬೇಕು ಎನ್ನುವ ಉದ್ದೇಶದಿಂದಲೇ ನಿರ್ಮಾಣಗೊಂಡ ಈ ಶಾಲೆಯ ಅಭಿವೃದ್ಧಿ ಬಗ್ಗೆ ದಾನಿಗಳು ಮತ್ತು ಊರಿನವರು ಸದಾ ಚಿಂತನೆಯನ್ನು ಮಾಡಬೇಕು.ಶಿಕ್ಷಣದಿಂದ ಸಮಾಜವನ್ನು ಅಭಿವೃದ್ಧಿಗೊಳಿಸಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.
ಹಕ್ಲಾಡಿ ಪಂಚಾಯಿತಿ ಉಪಾಧ್ಯಕ್ಷ ಸುಭಾಷ್ ಶೆಟ್ಟಿ ಹೊಳ್ಮಗೆ ಮಾತನಾಡಿ,58 ವರ್ಷಗಳ ಕಾಲದ ಇತಿಹಾಸವನ್ನು ಹೊಂದಿರುವ ಹಕ್ಲಾಡಿ ಪ್ರೌಢಶಾಲೆಯಲ್ಲಿ,ಆರಂಭದ ದಿನಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟು ಇದ್ದಿದೆ.ವಿದ್ಯಾಭಿಮಾನಿಗಳು ಮತ್ತು ದಾನಿಗಳ ಸಹಕಾರದಿಂದ ಇಂದು ಸುಸಜ್ಜಿತವಾದ ಸರಕಾರಿ ಪ್ರೌಢಶಾಲೆಯಾಗಿ ಮಾರ್ಪಾಡುಗೊಂಡು ಉತ್ತಮ ಶಿಕ್ಷಣದಿಂದಲೆ ಜಿಲ್ಲೆಯಲ್ಲಿ ಹೆಸರನ್ನು ಗಳಿಸಿದೆ ಎಂದು ಹೇಳಿದರು.ಉತ್ತಮವಾದ ಉದ್ದೇಶವನ್ನು ಇಟ್ಟುಕೊಂಡು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸ್ಥಾಪನೆಗೊಂಡ ಹಕ್ಲಾಡಿ ಪ್ರೌಢಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಉನ್ನತಮಟ್ಟದ ಸ್ಥಾನದಲ್ಲಿದ್ದು ದೇಶದ ಅಭಿವೃದ್ಧಿಗೆ ತಮ್ಮದೆ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದರು.

ಕುಂದಾಪುರ ಜೂನೀಯರ್ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಕಿರಣ ಹೆಗ್ಡೆ ಮಾತನಾಡಿ,ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು.
ಹಕ್ಲಾಡಿ ಗ್ರಾ.ಪಂ ಅಧ್ಯಕ್ಷೆ ಪ್ರೇಮಾ ದೇವಾಡಿಗ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು,ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಸಂಗೀತಾ ಸಂತೋಷ ಮೊಗವೀರ ಮತ್ತು ಸದಸ್ಯರು,ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್,ಸಂತೋಷ ಕುಮಾರ ಶೆಟ್ಟಿ ನೂಜಾಡಿ,ನಿವೃತ್ತ ಶಿಕ್ಷಕ ರಾಜೀವ ಶೆಟ್ಟಿ,ಕಲ್ಪನಾ ಅಶೋಕ ಕುಮಾರ ಶೆಟ್ಟಿ,ಅನಂತಪದ್ಮನಾಭ ಉಡುಪ,ಶಾರದ ಮೊಗವೀರ,ಉದಯ ಕುಮಾರ ಶೆಟ್ಟಿ,ಗಣಪಯ್ಯ ಶೆಟ್ಟಿ ಮತ್ತು ಹಕ್ಲಾಡಿ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಹಕ್ಲಾಡಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಮಂಜುನಾಥ.ಎಸ್ ಸ್ವಾಗತಿಸಿದರು.ಡಾ.ಕಿಶೋರ್ ಕುಮಾರ್ ಶೆಟ್ಟಿ ನಿರೂಪಿಸಿದರು.ಶಿಕ್ಷಕಿ ರೀಯಾ ಕ್ರಾಸ್ಟಾ ವಂದಿಸಿದರು.ಪ್ರತಿಭಾನ್ವಿತ ವಿದ್ಯಾಥಿಗಳಿಗೆ ಗೌರವ ಪುರಸ್ಕಾರ ವಿತರಿಸಲಾಯಿತು.ಅಕ್ಷರ ದಾಸೋಹ ಸಿಬ್ಬಂದಿಗಳನ್ನು ಗೌರವಿಸಲಾಯಿತು.ಶಾಲಾ ವಾರ್ಷಿಕೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಜರುಗಿತು.

Advertisement


Share

Leave a comment

Your email address will not be published. Required fields are marked *

You cannot copy content of this page