ಚಂದ್ರಯಾನ -3 ತಂಡದಲ್ಲಿ ಕುಂದಾಪುರದ-ಮಂಕಿ ಯುವ ವಿಜ್ಞಾನಿ ಆಕಾಶ್ ಶೆಟ್ಟಿ

Share

Advertisement
Advertisement
Advertisement

ಕುಂದಾಪುರ:ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಗೊಂಡು ಲ್ಯಾಂಡರ್‍ನ ಸಾಫ್ಟ್ ಲ್ಯಾಂಡಿಂಗ್ ಬುಧವಾರ ಯಶಸ್ವಿಯಾಗಿ ನೆರವೇರಿದೆ.ಚಂದ್ರಯಾನ-3 ಟೀಮ್‍ನಲ್ಲಿ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಮಂಕಿ ಕೇಳಾಮನೆ ನಿವಾಸಿ ಪಾರ್ವತಿ ಶೆಟ್ಟಿ ಮತ್ತು ಕೆರಾಡಿ ಗ್ರಾಮದ ಚಪ್ಪರಮಕ್ಕಿ ದಿ.ಅಶೋಕ್ ಶೆಟ್ಟಿ ಅವರ ಮಗ ಯುವ ವಿಜ್ಞಾನಿ ಆಕಾಶ್ ಶೆಟ್ಟಿ ಅವರು ಇರುವುದು ಕುಂದಾಪುರ ತಾಲೂಕಿಗೆ ಹೆಮ್ಮ.

ಯುವ ವಿಜ್ಞಾನಿ ಆಕಾಶ್ ಶೆಟ್ಟಿ ಅವರು ಇಸ್ರೋ ಚಂದ್ರಯಾನ-3 ರಲ್ಲಿ ಸ್ಪೇಸ್ ಕ್ರಾಫ್ಟ್ ಮೆಕ್ಯಾನಿಸಂ ಗ್ರೂಪ್‍ನಲ್ಲಿ ಪ್ರೋಜೆಕ್ಟ್ ಮ್ಯಾನೇಂಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.ಯೋಜನೆಯ ಯಶಸ್ಸಿಗೆ ಆಕಾಶ್ ಶೆಟ್ಟಿ ಅವರು ತಮ್ಮದೆ ಆದ ಕೊಡುಗೆಯನ್ನು ನೀಡಿರುವುದು ಯುವ ವಿಜ್ಞಾನಿಗಳಿಗೆ ಇನ್ನಷ್ಟು ಸ್ಫೂರ್ತಿ ನೀಡಿದೆ.ಕುಂದಾಪುರ- ಕೋಟದ ವಿವೇಕ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗವನ್ನು ಮಾಡಿದ ಅವರು ಬಳಿಕ ಹಾಸನದ ಮಲ್ನಾಡ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿ,ಎಂ.ಟೆಕ್ ಪೂರೈಸಿದ್ದರು.2015 ರಿಂದ ಆಕಾಶ್ ಶೆಟ್ಟಿ ಅವರು ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅವರು ಚಂದ್ರಯಾನ-2 ರಲ್ಲಿ ಕೂಡ ಕರ್ತವ್ಯವನ್ನು ನಿರ್ವಹಿಸಿದ್ದರು.
ವಿಶ್ವವು ಬೆರಗು ಗಣ್ಣಿನಿಂದ ನೋಡುತ್ತಿದ್ದ ಚಂದ್ರಯಾನ -3 ಯಶಸ್ಸಿಗೆ ಆಕಾಶ್ ಶೆಟ್ಟಿ ಅವರ ತಾಯಿ ಪಾರ್ವತಿ ಶೆಟ್ಟಿ ಮಂಕಿ-ಗುಜ್ಜಾಡಿ ಮತ್ತು ಕುಟುಂಬಸ್ಥರು ಸಂತೋಷವನ್ನು ವ್ಯಕ್ತಪಡಿಸಿದ್ದು ದೇಶಕ್ಕೆ ಮತ್ತು ನಮಗೆ ಹೆಮ್ಮ ಸಂಗತಿ ಆಗಿದೆ ಎಂದು ವಿಜಯ ಕರ್ನಾಟಕದೊಂದಿಗೆ ಖುಷಿಯನ್ನು ಹಂಚಿಕೊಂಡರು. ಪ್ರಸ್ತುತ ಆಕಾಶ್ ಶೆಟ್ಟಿ ಅವರ ಕುಟುಂಬ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ವಾಸವಾಗಿದ್ದಾರೆ.

ಚಂದ್ರಯಾನ -3 ತಂಡದಲ್ಲಿ ನಮ್ಮ ಮನೆ ಹುಡುಗ ಕೆಲಸ ಮಾಡಿವುರುದು ನಮಗೆ ಬಹಳಷ್ಟು ಖುಷಿಕೊಟ್ಟಿದೆ.ಇದೊಂದು ಅದ್ಭುತವಾದ ಕ್ಷಣ.ದೇಶದ ಕೋಟ್ಯಾಂತರ ಜನರ ಆಸೆ ಈಡೇರಿದ ಸಂತೋಷದ ಳಿಗೆಯು ಹೌದು.
-ರತ್ನಾಕರ ಶೆಟ್ಟಿ ಮಂಕಿ-ಗುಜ್ಜಾಡಿ,ದೈಹಿಕ ಶಿಕ್ಷಣ ಶಿಕ್ಷಕರು (ಆಕಾಶ್ ಶೆಟ್ಟಿ ಅವರ ದೊಡ್ಡಮ್ಮನ ಮಗ)


ದೇಶವೆ ಹೆಮ್ಮೆ ಪಡುವಂತ ಯೋಜನೆಯಲ್ಲಿ ನನ್ನ ಮಗ ಕೆಲಸ ಮಾಡಿರುವುದು ನನ್ನ ಜೀವನ ಸಾರ್ಥಕತೆಯನ್ನು ಕಂಡಿದೆ.ಚಂದ್ರಯಾನ- 2 ರಲ್ಲಿ ಹತಾಶೆಯನ್ನು ಪಟ್ಟಿದ್ದ ನಾವು,ಚಂದ್ರಯಾನ-3 ರಲ್ಲಿ ಖುಷಿ ಕಂಡಿದ್ದೇವೆ.ಇವೊಂದು ಕ್ಷಣವನ್ನು ಪದಗಳಿಂದ ಬಣ್ಣಿಸಲು ಸಾಧ್ಯವಿಲ್ಲ.
-ಪಾರ್ವತಿ ಶೆಟ್ಟಿ,ಮಂಕಿ-ಗುಜ್ಜಾಡಿ,ಆಕಾಶ್ ಶೆಟ್ಟಿ ತಾಯಿ

Advertisement


Share

Leave a comment

Your email address will not be published. Required fields are marked *

You cannot copy content of this page