ಗುರುಪೂರ್ಣಿಮಾ-ಗುರುಪೂಜೆ ಕಾರ್ಯಕ್ರಮ

Share

Advertisement
Advertisement
Advertisement


ಬೈಂದೂರು:ಭಾರತೀಯ ಸಂಗೀತ ಪ್ರಕಾರಗಳು ಶಾಸ್ರ್ತಾಧಾರಿತವಾಗಿದ್ದು ಅವುಗಳನ್ನು ವೇದಗಳೊಂದಿಗೆ ಸಮೀಕರಣಗೊಳಿಸಲಾಗಿದೆ.ನಮ್ಮ ಮಕ್ಕಳನ್ನು ಶಿಕ್ಷಣದ ಜತೆಗೆ ಯಾವುದಾದರೊಂದು ಸಂಗೀತ ಪ್ರಕಾರದ ಅಧ್ಯಯನದಲ್ಲಿ ತೊಡಗಿಸುವುದರಿಂದ ಅವರ ವ್ಯಕ್ತಿತ್ವ ಬೆಳಗುತ್ತದೆ ಎಂದು ಸಂಸ್ಕøತ ಪ್ರಾಧ್ಯಾಪಕ ಡಾ.ಗೋಪಾಲಕೃಷ್ಣ ಭಟ್ ಹೇಳಿದರು.
ಕುಂದಾಪುರದ ಗುರುಪರಂಪರಾ ಸಂಗೀತಸಭಾ ಆಶ್ರ್ರಯದಲ್ಲಿ ಮರವಂತೆ ಸಾಧನಾ ಸಮುದಾಯ ಭವನದ ವಿ.ಕೆ.ಕಾಮತ್ ಸಭಾಗೃಹದಲ್ಲಿ ನಡೆದ ಗುರುಪೂರ್ಣಿಮಾ-ಗುರುಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಾಸ್ತ್ರೀಯ ಸಂಗೀತದ ಕಲಿಕೆ ಮತ್ತು ಶ್ರವಣದಿಂದ ಮನುಷ್ಯರಿಗೆ ವಿಶೇಷವಾದ ಅನುಭೂತಿ ಸಿದ್ಧಿಸುವುದರ ಜತೆಗೆ ಹೃದಯ ಸಂಸ್ಕಾರಗೊಳ್ಳುತ್ತದೆ.ನಾದಕ್ಕೆ ಎಲ್ಲ ಜೀವಿಗಳ ಮೇಲೂ ಧನಾತ್ಮಕ ಪರಿಣಾಮ ಬೀರುವ ಶಕ್ತಿ ಇದೆ ಎಂದರು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಗೋವಿಂದ ಅಡಿಗ,ಶಿಕ್ಷಕ ಶಂಭು ಭಟ್,ಲೇಖಕಿ ನರ್ಮದಾ ಪ್ರಭು ಉಪಸ್ಥಿತರಿದ್ದರು.ಸಂಗೀತ ತರಗತಿ ವಿದ್ಯಾರ್ಥಿಗಳು ಸಂಗೀತ ಕಚೇರಿ ನಡೆಸಿಕೊಟ್ಟರು.ಶಶಿಕಿರಣ ಮಣಿಪಾಲ್,ಗಣಪತಿ ಹೆಗಡೆ ಹರಿಕೇರಿ,ಅಜಯ್ ಹೆಗಡೆ ವರ್ಗಾಸುರ ಸಹವಾದನ ನೀಡಿದರು.ಗುರುಪರಂಪರಾ ಸಂಗೀತಸಭಾದ ವಿದ್ಯಾರ್ಥಿಗಳು ವಿದ್ವಾನ್ ಸತೀಶ ಭಟ್ ಮತ್ತು ವಿದುಷಿ ಪ್ರತಿಮಾ ಭಟ್ ದಂಪತಿಗೆ ಗುರುವಂದನೆ ಸಲ್ಲಿಸಿದರು.ನೇಹಾ ಹೊಳ್ಳ ಸ್ವಾಗತಿಸಿದರು.ಸಭ್ಯಾ ನಿರೂಪಿಸಿದರು.ಸಾತ್ಯಕಿ ವಂದಿಸಿದರು.

Advertisement


Share

Leave a comment

Your email address will not be published. Required fields are marked *

You cannot copy content of this page