ಸಮೃದ್ಧ ಬೈಂದೂರು-ಸಮರ್ಥ ಭಾರತ,ಬಿಜೆಪಿ ಕಾರ್ಯಕರ್ತರ ಸಮಾವೇಶ

Share

Advertisement
Advertisement
Advertisement

ಕುಂದಾಪುರ:ರಾಜಕಾರಣದಲ್ಲಿನ ನಡೆ ನುಡಿಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಹಾಗಾಗಿಯೇ ಇಂದು ರಾಜಕಾರಣ ಎನ್ನುವುದು ಒಳ್ಳೆ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ಜನಪ್ರಿಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜೀ ಅವರನ್ನು ಟೀಕಿಸಿದ್ದರ ಪರಿಣಾಮ ಮಾಲ್ಡೀವ್ಸ್ ಸರಕಾರ ತನ್ನ ಮೂವರು ಕ್ಯಾಬಿನೆಟ್ ದರ್ಜೆಯ ಸಚಿವರನ್ನು ವಜಾ ಮಾಡಿರುವುದೆ ಸಾಕ್ಷಿ ಆಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂದಸ ಬಿ.ವೈ ರಾಘವೇಂದ್ರ ಹೇಳಿದರು.
ಬಿಜೆಪಿ ಬೈಂದೂರು ಮಂಡಲದ ವತಿಯಿಂದ ಹೆಮ್ಮಾಡಿ ಜಯಶ್ರೀ ಸಭಾಂಗಣದಲ್ಲಿ ಸೋಮವಾರ ನಡೆದ ಸಮೃದ್ಧ ಬೈಂದೂರು-ಸಮರ್ಥ ಭಾರತ ಹಾಗೂ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎರ್ಮಜೆನ್ಸಿ ಹೇರಿದ ಇಂದಿರಾ ಗಾಂಧಿ ಸರಕಾರ ಜನರನ್ನು ತಿರಸ್ಕಾರ ಮನೋಭಾವದಿಂದ ನೋಡಿದ್ದರ ಪರಿಣಾಮ ಕಾಂಗ್ರೆಸ್ ಪಕ್ಷ ದೇಶದಲ್ಲಿ ತನ್ನ ನೆಲೆಯನ್ನು ಕಳೆದುಕೊಂಡಿದೆ.ಭಾರತದಲ್ಲಿ ಇಂದು ಬದಲಾದ ರಾಜಕೀಯ ವ್ಯವಸ್ಥೆ ಸ್ಥಾಪನೆಗೊಂಡಿದ್ದು ದೇಶ ಅಭಿವೃದ್ಧಿ ಪಥಾದತ್ತ ಸಾಗುತ್ತಿದೆ ಎಂದರು.ಜನರ ಕಲ್ಯಾಣದ ಬಗ್ಗೆ ಅವಿರತವಾಗಿ ಶ್ರಮಿಸುತ್ತಿರುವ ಮೋದಿಜಿ ಸರಕಾರ ಮರಳಿ ತರಲು ಕಾರ್ಯಕರ್ತರು ಶ್ರಮವಹಿಸಬೇಕು ತಾನು ಸಂಸದ ಎನ್ನುವುದನ್ನು ಮರೆತು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಮಾತನಾಡಿ,ಸಮೃದ್ಧ ಬೈಂದೂರು ಯೋಜನೆಯಡಿ ಕ್ಷೇತ್ರವನ್ನು ಯಾವೆಲ್ಲಾ ರೀತಿಯಲ್ಲಿ ಅಭಿವೃದ್ಧಿಗೊಳಿಸಬಹುದು ಎನ್ನುವುದರ ಬಗ್ಗೆ ಈಗಾಗಲೇ ಕಾರ್ಯಯೋಜನೆಯನ್ನು ರೂಪಿಸಲಾಗಿದೆ.ವಿಶ್ವಕರ್ಮ ಯೋಜನೆ ಫಲಾನುಭವಿಗಳನ್ನು ಗುರುತಿಸಲು ಕಾರ್ಯಕರ್ತರು ಕ್ರಮ ಕೈಗೊಳ್ಳಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಅಧ್ಯಕ್ಷತೆ ವಹಿಸಿದ್ದರು,ಬೈಂದೂರು ಮಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಜಿಲ್ಲಾ ಕಾರ್ಯದರ್ಶಿ ಮಾಲತಿ ಬಿ ನಾಯ್ಕ್,ಉಪಾಧ್ಯಕ್ಷರಾದ ಸಾಮ್ರಾಟ್ ಶೆಟ್ಟಿ,ಶೇಖರ ಖಾರ್ವಿ,ಶ್ಯಾಮಲ ಕುಂದರ್,ಪ್ರೇಮಾ ಪೂಜಾರಿ,ಗಣೇಶ ಗಾಣಿಗ,ವಿನೋಧ ಭಂಡಾರಿ,ಕಾರ್ಯದರ್ಶಿಗಳಾದ ಎಮ್.ಆರ್ ಶೆಟ್ಟಿ,ಶೇಖರ ಕುಲಾಲ್,ಮಾಲಿನಿ.ಕೆ,ಶ್ಯಾಮಲ ನೇರಳಕಟ್ಟೆ,ವಾಸು ಮರಾಠಿ,ಗಣೇಶ್ ಪೂಜಾರಿ,ಅಶೋಕ,ಭಾಗಿರಥಿ,ಅನುರ ಮೆಂಡನ್,ಚೆಂದು ಜೋಗಿ,ಚಂದ್ರ ಉಪಸ್ಥಿತರಿದ್ದರು.ಮಹೇಂದ್ರ ಪೂಜಾರಿ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ನಿರೂಪಿಸಿದರು.ಬಿ.ಎಸ್ ಸುರೇಶ ಶೆಟ್ಟಿ ವಂದಿಸಿದರು.ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು,ಪ್ರಮುಖ ಮುಂಖಡರುಗಳು,ಕಾರ್ಯಕರ್ತರು ಭಾಗವಹಿಸಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page