ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ

Share

Advertisement
Advertisement
Advertisement

ಕುಂದಾಪುರ:ಮನೋಸೋ ಇಚ್ಛೆ ಮರಗಳನ್ನು ಕಡಿದು ಭೂಮಿಯನ್ನು ಬಗೆದಿದ್ದರ ಪರಿಣಾಮ ಪ್ರಕೃತಿಯಲ್ಲಿ ಅಸಮಾತೋಲನ ಉಂಟಾಗಿ ಮಳೆ,ಬೆಳೆ ಕುಂಠಿತವಾಗುತ್ತಿದೆ.ಶುದ್ಧ ಗಾಳಿ ಸೇವನೆಗೂ ಪರಿತಪಿಸುವಂತೆ ಆಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಬೈಂದೂರು ವಲಯದ ಬಡಾಕೆರೆ ಉತ್ತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು.
ಭೂಮಿ ಹಸಿರಾಗಿದ್ದಾರೆ ಮಾತ್ರ ಮಾನವ ಸಹಿತ ಜೀವಿ ಸಂಕುಲಗಳು ಬದುಕಬಹುದಾಗಿದೆ.ಗಿಡಗಳನ್ನು ನೆಟ್ಟು ಬೆಳೆಸಿ ಪೋಷಿಸುವುದರ ಮೂಲಕ ಪ್ರಕೃತಿ ಉಳಿವಿಗೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
ವಲಯಾ ಅರಣ್ಯಾಧಿಕಾರಿ ಕಿರಣ್ ಬಾಬು,ಬಡಾಕೆರೆಯನ್ನು ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವ ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀಶಾರದ ಪೀಠಂ ಶೃಂಗೇರಿ ವೇದ ಮೂರ್ತಿ ಲೋಕೇಶ್ ಅಡಿಗ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಬಾಬು ದೇವಾಡಿಗ,ಆರ್.ಎಫ್.ಒ ದಿಲೀಫ್,ವಕೀಲರಾದ ವಿಶ್ವನಾಥ ಶೆಟ್ಟಿ ಗಂಟಿಹೊಳೆ,ಮಹೇಂದ್ರ ಪೂಜಾರಿ,ಅಬ್ದುಲ್ ಖಾದರ್,ಯೂಸಫ್,ವಾಸು ಪೂಜಾರಿ,ವೇದ ಮೂರ್ತಿ ನಾಗೇಂದ್ರ ಅಡಿಗ,ಪೆÇೀಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಶ್ರೀಧರ ಬಡಾಕೆರೆ ಸ್ವಾಗತಿಸಿದರು.ವೇದ ಮೂರ್ತಿ ಲೋಕೇಶ್ ಅಡಿಗ ನಿರೂಪಿಸಿದರು.ಮುಖ್ಯೋಪಾಧ್ಯಾಯಿನಿ ರೇಣುಕಾ ವಂದಿಸಿದರು.ಶಾಲಾ ಆವರಣದಲ್ಲಿ ಹೊಸ ಕೈ ತೋಟವನ್ನು ರಚಿಸಲಾಯಿತು.ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.ಆರ್ಯ ಬಿಲ್ಡ್‍ಕೇರ್ ಮಾಲೀಕರಾದ ನಾಗೇಂದ್ರ ದೇವಾಡಿಗ,ಲಂಬೋದರ ಶೆಟ್ಟಿ,ಆರ್.ಕೆ ರಾಘು ಉಪ್ಪುಂದ ಅವರು ಗಿಡಗಳನ್ನು ಕೊಡುಗೆಯಾಗಿ ನೀಡಿದರು.

Advertisement


Share

Leave a comment

Your email address will not be published. Required fields are marked *

You cannot copy content of this page