ಗಂಗೊಳ್ಳಿ ಠಾಣೆ ಪಿಎಸ್ಐ ಆಗಿ ಪವನ್ ನಾಯ್ಕ್ ಅಧಿಕಾರ ಸ್ವೀಕಾರ

ಕುಂದಾಪುರ:ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಅಪರಾಧಿಗಳಿಗೆ ಸಿಂಹ ಸ್ವಪ್ನದಂತ್ತಿರುವ ಖಡಕ್ ಪೊಲೀಸ್ ಆಫೀಸರ್ ಪವನ್ ನಾಯ್ಕ್ ಅವರು ಗಂಗೊಳ್ಳಿ ಠಾಣೆ ಠಾಣಾಧಿಕಾರಿ ಆಗಿ ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದರು.
ಗಂಗೊಳ್ಳಿ ಠಾಣೆ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಪಿಎಸ್ಐ ಹರೀಶ್ ಆರ್ ನಾಯ್ಕ್ ಅವರು ಬೇರೆ ಠಾಣೆಗೆ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಗಂಗೊಳ್ಳಿ ಠಾಣೆ ನೂತನ ಪಿಎಸ್ಐ ಆಗಿ ಪವನ್ ನಾಯ್ಕ್ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ.