ಸಮೃದ್ಧಿ ಸಂಜೀವಿನಿ ಒಕ್ಕೂಟ ಗುಜ್ಜಾಡಿ ವಾರ್ಷಿಕ ಮಹಾಸಭೆ

ಕುಂದಾಪುರ:ಸಮೃದ್ಧಿ ಸಂಜೀವಿನಿ ಒಕ್ಕೂಟ ಗುಜ್ಜಾಡಿ ಅದರ ವಾರ್ಷಿಕ ಮಹಾಸಭೆ ಗುಜ್ಜಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.ತಾಲೂಕು ಒಕ್ಕೂಟ ಅಧ್ಯಕ್ಷೆ ವಿಜಯ ಅಧ್ಯಕ್ಷತೆ ವಹಿಸಿದ್ದರು.ಗುಜ್ಜಾಡಿ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಉದ್ಘಾಟಿಸಿದರು.
ಗುಜ್ಜಾಡಿ ಪಂಚಾಯಿತಿ ಉಪಾಧ್ಯಕ್ಷೆ ನಾಗರತ್ನ ಮತ್ತು ಸದಸ್ಯರಾದ ಹರೀಶ್ ಮೇಸ್ತ,ಲೋಲಕ್ಷಿ ಪಂಡಿತ್,ಜೆಸಿಂತ,ತುಂಗ ಹಾಗೂ ಪಿಡಿಒ ಶೋಭಾ,ಸಂಜೀವಿನಿ ಸಂಘದ ಸದಸ್ಯರು ಉಪಸ್ಥಿತರಿದ್ದರು.ಪ್ರಿಯಾಂಕಾ ವಂದಿಸಿದರು.ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಅತ್ಯುತ್ತಮ ಸ್ವಸಾಹಯ ಸಂಘಗಳನ್ನು ಗೌರವಿಸಲಾಯಿತು.ರೇಷ್ಮಾ ಸ್ವಾಗತಿಸಿದರು.ಪ್ರಮೀಳಾ ನಿರೂಪಿಸಿದರು.