ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ವತಿಯಿಂದ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ

Share

Advertisement
Advertisement
Advertisement

ಉಡುಪಿ:ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ವತಿಯಿಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ ಅವರನ್ನು ಭೇಟಿ ಮಾಡಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರಕ್ಕೆ ಕೊರಂಗ್ರಪಾಡಿಯಲ್ಲಿನ ಸರ್ಕಾರಿ ಶಾಲೆಯ ಜಾಗವನ್ನು ಸೇವಾಭಾರತಿ ಸಂಸ್ಥೆಗೆ ಕಲ್ಪಿಸುವಂತೆ ಮನವಿ ಮಾಡಲಾಯಿತು.

ಉಡುಪಿ ಜಿಲ್ಲೆಯಲ್ಲಿರುವ ಒಟ್ಟು 80 ಮಂದಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರ ಮನೆಗೆ 108 ಅಂಬುಲೆನ್ಸ್ ನ ಮುಖಾಂತರ ಆರೋಗ್ಯ ಸ್ಪರ್ಶ ಯೋಜನೆಯಡಿ ಮನೆ ಮನೆಗೆ ಭೇಟಿ ಮಾಡಿ ದಿವ್ಯಾಂಗ ಚೇತನರನ್ನು ತಪಾಸಣೆ ಮಾಡುವ ಕುರಿತು ಹಾಗೂ
ಉಡುಪಿ ಜಿಲ್ಲೆಯಲ್ಲಿರುವ ಟಿಬಿ ರೋಗಸ್ಥರ ಬಗ್ಗೆ ಚರ್ಚಿಸಿ,ಉಡುಪಿ ನಗರ ವ್ಯಾಪ್ತಿಯಲ್ಲಿರುವ ಟಿಬಿ ರೋಗಸ್ಥರನ್ನು ದತ್ತು ಸ್ವೀಕಾರ ಮಾಡಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಟಿಬಿ ರೋಗಮುಕ್ತ ಉಡುಪಿಯನ್ನು ಮಾಡಲು ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿ ಅವರೊಂದಿಗೆ ಚರ್ಚಿ ಸಲಾಯಿತು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಕೊಡವೂರು ವಾರ್ಡಿನ ನಗರಸಭಾ ಸದಸ್ಯರಾದ ಕೆ ವಿಜಯ ಕೊಡವೂರು ಮತ್ತು ಸಾಮಾಜಿಕ ಕಾರ್ಯಕರ್ತರಾದ ರಾಧಾಕೃಷ್ಣ ಮೆಂಡನ್ ಹಾಗೂ ಅಖಿಲೇಶ್. ಎ ಇನ್ನಿತರರು ಉಪಸ್ಥಿತರಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page