ನಾಡ:ದಲಿತ ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Share

Advertisement
Advertisement
Advertisement

ಕುಂದಾಪುರ:ಇತ್ತೀಚಿನ ದಿನಗಳಲ್ಲಿ ಸಂಘಟನೆಗಳಿಗೆ ಬರುವ ದೂರುಗಳು ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ್ದು ಆಗಿದ್ದು ಸಮಾಜದಲ್ಲಿ ನಮ್ಮನ್ನು ತುಳಿಯುವಂತಹ ಸಂಸ್ಕೃತಿ ಇನ್ನೂ ಕೂಡ ಮುಂದುವರೆದಿರುವುದು ನಮ್ಮ ಯುವ ಪೀಳಿಗೆ ಮೇಲೆ ಬಹಳಷ್ಟು ಪರಿಣಾಮ ಬೀರಿದೆ.ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ನಾಡದಲ್ಲಿ ದಲಿದತ ಹುಡುಗರ ಮೇಲೆ ಹಲ್ಲೆ ಮಾಡಿದ ಏಳು ಆರೋಪಿಗಳನ್ನು ಕೂಡಲೆ ಬಂಧಿಸಲು ಕ್ರಮ ಕೈಗೊಳ್ಳಬೇಕೆಂದು ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನ ಮನೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.
ಬೈಂದೂರು ತಾಲೂಕಿನ ನಾಡಗುಡ್ಡೆಅಂಗಡಿಯಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭ ದಲಿತ ಹುಡುಗರ ಮೇಲೆ ಹಲ್ಲೆ ನಡೆಸಿದ ಮೇಲ್ವರ್ಗದ ಸಮುದಾಯದ ಯುವಕರನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ರಾಮನಗರ-ಸೇನಾಪುರ ವತಿಯಿಂದ ನಾಡಗುಡ್ಡೆಅಂಗಡಿ ರಾಮನಗರ ಅಂಬೇಡ್ಕರ್ ಭವನದ ವಠಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ವಿಭಾಗೀಯ ಸಂಚಾಲಕರು ಮೈಸೂರು ವಿಶ್ವನಾಥ ಬೆಂಳ್ಳಂಪಳ್ಳಿ ಸಭೆಯನ್ನು ಉದ್ದೆಶೀಸಿ ಮಾತನಾಡಿ,ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಮೇಲೆ 307 ಪ್ರಕರಣ ದಾಖಲು ಮಾಡಿದ್ದರು ಇಲ್ಲಿ ತನಕ ಆರೋಪಿಗಳನ್ನು ಬಂಧಿಸುವಂತಹ ಕೆಲಸ ಆಗದಿರುವುದು ಹಾಸ್ಯಾಸ್ಪದವಾಗಿದೆ.ರಾಜಕೀಯ ಒತ್ತಡದಿಂದ ಆರೋಪಿಗಳನ್ನು ಬಂಧಿಸಲು ವಿಳಂಭ ನೀತಿಯನ್ನು ಅನುಸರಿಸಲಾಗುತ್ತಿದ್ದು ಆರೋಪಿಗಳನ್ನು ಬಂಧನಕ್ಕೆ ಒಳಪಡಿಸುವಂತಹ ಕೆಲಸ ಕೂಡಲೇ ಆಗಬೇಕು ಇಲ್ಲವಾದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಪೊಲೀಸ್ ಇಲಾಖೆಗೆ ಎಚ್ಚರಿಕೆಯನ್ನು ನೀಡಿದರು.
ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರ ಮಾತನಾಡಿ,ರಾಜಕೀಯ ಒತ್ತಡ ಮತ್ತು ಪ್ರಭಾವಕ್ಕೆ ಒಳಗಾಗದೆ ಪೊಲೀಸ್ಇಲಾಖೆ ದಲಿತರನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದರು.ದಲಿತ ಸಮಿತಿ ಮುಖಂಡರ ಮಾತಿಗೆ ಸ್ಪಂದನೆ ವ್ಯಕ್ತಪಡಿಸಿದ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪನವರು ಆರೋಪಿಗಳನ್ನು ಶೀಘೃವಾಗಿ ಬಂಧಿಸಲು ಕ್ರಮ ಕೈಗೊಳ್ಳಲಾಗುದೆಂದು ಭರವಸೆಯನ್ನು ನೀಡಿದರು.

ಈ ಸಂದರ್ಭ ಜಿಲ್ಲಾ ದಲಿತ ದೌರ್ಜನ್ಯ ಸಮಿತಿ ಸಂಚಾಲಕ ವಾಸುದೇವ ಮುದೂರು,ಬೈಂದೂರು ತಾಲೂಕು ಸಂಚಾಲಕ ನಾಗರಾಜ ಉಪ್ಪುಂದ,ತಾಲೂಕು ಸಂಘಟನೆ ಸಂಚಾಲಕ ಸುರೇಶ್ ಹಕ್ಲಾಡಿ,ಜಿಲ್ಲಾ ಸಮಿತಿ ಸದಸ್ಯ ಶ್ಯಾಮ ಸುಂದರ ತೆಕ್ಕಟ್ಟೆ,ಮಂಜುನಾಥ ನಾಗೂರು,ಕೊಲ್ಲೂರು ದೇವಳದ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ,ಸ್ಥಳೀಯ ಮುಖಂಡ ಸತೀಶ ಕೆ ರಾಮನಗರ,ಶಂಭು ಗುಡ್ಡಮ್ಮಾಡಿ,ರಮೇಶ ಪಡುಕೋಣೆ ಉಪಸ್ಥಿತರಿದ್ದರು.ಗಂಗೊಳ್ಳಿ ಠಾಣೆ ಪಿಎಸ್‍ಐ ಹರೀಶ್ ಆರ್ ನಾಯ್ಕ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.ದಲಿತ ಸಮಿತಿ ಸದಸ್ಯರು ಭಾಗವಹಿಸಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page