ತ್ರಾಸಿ ಅಂಬಾ ಶೋ ರೂಂ ಗೆ ಆಕಸ್ಮಿಕ ಬೆಂಕಿ,ಕೋಟ್ಯಂತರ ರೂಪಾಯಿ ನಷ್ಟ

ಕುಂದಾಪುರ ತಾಲೂಕಿನ ಪ್ರಸಿದ್ಧ ತ್ರಾಸಿ ಅಂಬಾ ಶೋ ರೂಂ ಗೆ ಆಕಸ್ಮಿಕವಾಗಿ ತಗುಲಿದ ಬೆಂಕಿ ಯಿಂದಾಗಿ ಶೋ ರೂಂ ದಗದಹಿಸಿದೆ.ಕೋಟಿ.ಗೂ ಅಧಿಕ ನಷ್ಟ ಸಂಭವಿಸಿದ ಘಟನೆ ಭಾನುವಾರ ನಡೆದಿದೆ.


ಆಕಸ್ಮಿಕವಾಗಿ ತಗುಲಿದ ಬೆಂಕಿ ಶೊ ರೂಂ ಇಡಿ ವ್ಯಾಪಿಸಿದ್ದು ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.
ಅಂಬಾ ಶೊ ರೂಂ ಬಿಲ್ಡಿಂಗ್ ನಲ್ಲಿ,ಅಂಬಾ ಹೋಮ್ ಅಪ್ಲೆಯನ್ಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ತಾಲೂಕು ಕಛೇರಿ, ಪೋಸ್ಟ್ ಆಫೀಸ್,ಬಟ್ಟೆ ಶೋ ರೂಂ, ಲಾಡ್ಜ್ ಸೇರಿದಂತೆ ಹಲವು ಕಛೇರಿಗಳು ಕಾರ್ಯಾಚರಣೆ ಮಾಡುತ್ತಿವೇ.
ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ.