ಜಲಜೀವನ್ ಹೊಂಡಕ್ಕೆ ಉರುಳಿದ ಸರಕಾರಿ ಬಸ್

ಉಡುಪಿ:ಕುಂದಾಪುರ ದಿಂದ ಗಂಗೊಳ್ಳಿಗೆ ಸಾಗುತ್ತಿದ್ದ ಸರಕಾರಿ ಬಸ್ ಗುಜ್ಜಾಡಿ ಮುಖ್ಯ ರಸ್ತೆಯಲ್ಲಿ ಬೇರೊಂದು ಗಾಡಿಗೆ ಸೈಡ್ ಕೊಡುತ್ತಿದ್ದ ಸಮಯದಲ್ಲಿ ರಸ್ತೆ ಬದಿಯಲ್ಲಿದ್ದ ಜಲ ಜೀವನ್ ಮೆಷಿನ್ ನೀರಿನ ಪೈಪ್ ಲೈನ್ ಹೊಂಡದಲ್ಲಿ ಸಿಲುಕಿದ ಘಟನೆ ಶನಿವಾರ ನಡೆದಿದೆ.ಕ್ರೈನ್ ಸಹಾಯದಿಂದ ಹೊಂಡದಲ್ಲಿ ಸಿಲುಕಿದ ಬಸ್‍ನ್ನು ಮೇಲಕ್ಕೆ ಎತ್ತಲಾಯಿತು.ಮುಳ್ಳಿಕಟ್ಟೆ ಗುಜ್ಜಾಡಿ ಮಾರ್ಗದ ಮುಖ್ಯ ರಸ್ತೆ ಬದಿಯಲ್ಲಿ ಜಲಜೀವನ್ ನೀರಿನ ಪೈಪ್ ಲೈನ್ ಹೊಂಡ ಅಪಾಯವನ್ನು ತಂದೊಡ್ಡುತ್ತಿದ್ದು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮನೆ ಮೇಲೆ ಮರ ಬಿದ್ದು ಹಾನಿ:ವಿಪತ್ತು ನಿರ್ವಹಣಾ ತಂಡದಿಂದ ತೆರವು

ಕುಂದಾಪುರ:ಭಾನುವಾರ ಸುರಿದ ಭಾರಿ ಗಾಳಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಯಂಗಡಿ ಜನತಾ ಕಾಲೋನಿಯಲ್ಲಿ ಬೃಹತ್ ಗಾತ್ರದ ಮರ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ.ಗಂಗೆ ದೇವಾಡಿಗ ಹಾಗೂ ರಾಘವೇಂದ್ರ ಭಂಡಾರಿ ಅವರ ಮನೆಗೂ ಹಾನಿ ಉಂಟಾಗಿದೆ.ರಸ್ತೆ ಸಂಚಾರಕ್ಕೂ ತೊಡಕು ಉಂಟಾಗಿತ್ತು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಪತ್ತು ನಿರ್ವಹಣಾ ತಂಡ ಪಡುಕೋಣೆ-ನಾಡ ವಲಯದ ಸದಸ್ಯರು ಕ್ಷೀಪ್ರಗತಿಯಲ್ಲಿ ಮರವನ್ನು ತೆರವುಗೊಳಿಸಿದರು.

ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ.

ಹೆಮ್ಮಾಡಿ:ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ,ಸಹೋದರಿ ನಿವೇದಿತಾ ಪ್ರತಿಷ್ಠಾನ ಉಡುಪಿ, ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಅವರ ಜಂಟಿ ಆಶ್ರಯದಲ್ಲಿ ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಾಗಲಕ್ಷ್ಮಿ ಬೆಂಗಳೂರು ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿ,ಎಲ್ಲರಲ್ಲಿಯೂ ಒಂದು ವಿಶೇಷ ಕೌಶಲ್ಯ ಇರುತ್ತದೆ,ಇಂದಿನ ಜೀವನದಲ್ಲಿ ಶಿಕ್ಷಣದ ಜೊತೆ-ಜೊತೆಗೆ ಕೌಶಲ್ಯವನ್ನೂ ವೃದ್ಧಿಸಿಕೊಳ್ಳುವುದು ಬಹಳ ಪ್ರಮುಖವಾದದ್ದು,ವಿದ್ಯಾರ್ಥಿ ಜೀವನದಲ್ಲಿ ಪಡೆದ ಅನುಭವ ನಿಮ್ಮ ಜೀವನದ ಬದುಕಿನ ಅಡಿಪಾಯವಾಗಬೇಕು ಎಂದು ಹೇಳಿದರು.ರೋಟರಿ ರಿವರ್ ಸೈಡ್ ಕುಂದಾಪುರ ಅಧ್ಯಕ್ಷ […]

You cannot copy content of this page