ತಲ್ಲೂರು:ಶ್ರೀಬ್ರಹ್ಮ ಬೈದರ್ಕಳ,ಪರಿವಾರ ದೈವಗಳ ಮೂರ್ತಿ ಮೆರವಣಿಗೆ

ಕುಂದಾಪುರ:ತಾಲೂಕಿನ ತಲ್ಲೂರು ಗರಡಿ ಶ್ರೀಬ್ರಹ್ಮ ಬೈದರ್ಕಳ ಮತ್ತು ಮುಡೂರ ಹಾೈಗುಳಿ ಹಾಗೂ ಪರಿವಾರ ದೇವರ ಪುನರ್ ಪ್ರತಿಷ್ಠೆ,ಬ್ರಹ್ಮಕಲಶ ಕಾರ್ಯಕ್ರಮದ ಅಂಗವಾಗಿ ದೈವಗಳ ಮೂರ್ತಿ ಪುರಪ್ರವೇಶ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಅವರು ದೈವಗಳ ಪುರಪ್ರವೇಶ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ದೈವಸ್ಥಾನದ ಅನುವಂಶಿಕ ಮೊಕ್ತೇಸರರು,ಪ್ರಾತ್ರಿಗಳು,ಗ್ರಾಮಸ್ಥರು,ಅರ್ಚಕರು ಉಪಸ್ಥಿತರಿದ್ದರು.ಜ.21 ರಿಂದ ಜ.28 ರ ವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.