ಪಡುಕೋಣೆ:ನಾಟಿ ವೈದ್ಯ ಮಾಕ್ಷಿಮ್ ಒಲಿವೆರಾ ಗಿಡಮೂಲಿಕೆ ಔಷಧ ನೀಡಿಕೆ

Share

Advertisement
Advertisement
Advertisement

ಕುಂದಾಪುರ:ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕೋಣೆ ನಿವಾಸಿ ಮಾಕ್ಷಿಮ್ ಒಲಿವೆರಾ ಅವರು ಕಳೆದ 25 ವರ್ಷಗಳಿಂದ ನಾಟಿ ಔಷಧವನ್ನು ನೀಡುವುದರ ಮುಖೇನ ಸಾವಿರಾರು ಜನರನ್ನು ರೋಗ ಮುಕ್ತಗೊಳಿಸುವುದರ ಮೂಲಕ ವಿಶಿಷ್ಟವಾದ ಸಾಧನೆಗೆ ಪಾತ್ರರಾಗಿದ್ದಾರೆ ಅವರ ಸಮಾಜಿಕ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ನಾಟಿ ಔಷಧವನ್ನು ಕೊಡುತ್ತಿರುವ ತಮ್ಮ ತಂದೆಯೊಂದಿಗೆ ಕೂಡಿಕೊಂಡು ಮಾಕ್ಷಿಮ್ ಒಲಿವೆರಾ ಅವರು ತಮ್ಮ 20ನೇ ವಯಸ್ಸಿನಲ್ಲಿಯೇ ಪ್ರಕೃತಿಯಲ್ಲಿ ಸಿಗುವ ಔಷಧ ಗಿಡಗಳ ಮಾಹಿತಿಯನ್ನು ಪಡೆದುಕೊಂಡು ಕ್ರಮೇಣ ತಂದೆಯ ಕಾಲದ ನಂತರ ಸ್ವತಂತ್ರವಾಗಿ ನಾಟಿ ಔಷಧವನ್ನು ನೀಡುತ್ತಾ ಬಂದಿರುತ್ತಾರೆ.
ಋಷಿಮುನಿಗಳು,ವೇದ ಪಂಡಿತರ ಕಾಲದಲ್ಲಿದ್ದ ನಾಟಿ ಔಷಧ ಪದ್ಧತಿಗೆ ಶತ ಶತಮಾನಗಳಷ್ಟು ಇತಿಹಾಸವಿದೆ ಭಾರತದ ಔಷಧ ಮೂಲವೆ ನಾಟಿ ಔಷಧ ಎಂದರೆ ತಪ್ಪಾಗಲಾರದು.ಆಧುನಿಕ ಚಿಕಿತ್ಸಾ ಪದ್ಧತಿಯ ಕಾಲದಲ್ಲಿಯೂ ನಾಟಿ ಔಷಧಕ್ಕೆ ಬಹಳಷ್ಟು ಮಾನ್ಯತೆ ಇದೆ.ನಾಟಿ ಔಷಧದ ಚಿಕಿತ್ಸೆಯನ್ನು ಪಡೆದುಕೊಳ್ಳಲು ವಿದೇಶಿಗರು ಭಾರತದ ಹಳ್ಳಿಗಳತ್ತಾ ಧಾವಿಸಿ ಬರುತ್ತಿರುವುದು ಒಂದು ದೊಡ್ಡ ನಿದರ್ಶನವಾಗಿದೆ.

ಕನಿಷ್ಠ ದರದಲ್ಲಿ ರೋಗ ಗುಣಪಡಿಸುವಿಕೆ:ನಾಟಿ ವೈದ್ಯರಾದ ಮಾಕ್ಷಿಮ್ ಒಲಿವೆರಾ ಅವರು ಮೂತ್ರಕೋಶ ಹಾಗೂ ಪಿತ್ತಕೋಶದ ಕಲ್ಲು,ಸರ್ಪಸುತ್ತು,ಬಾವು,ಹೊಟ್ಟೆ ಸಮಸ್ಯೆ,ಹಾವು ಕಡಿತ,ಮೂಲವ್ಯಾಧಿ,6 ರೀತಿಯ ಜಾಂಡೀಸ್ ಕಾಯಿಲೆಗಳು,ಗರ್ಭಕೋಶದ ಸಮಸ್ಯೆ ಹಾಗೂ ಆರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಸಹಿತ ಹಲವಾರು ಕಾಯಿಲೆಗಳಿಗೆ ನಾಟಿ ಔಷಧವನ್ನು ನೀಡುತ್ತಾರೆ.ಸಕ್ಕರೆ ಕಾಯಿಲೆಯಂತ ರೋಗಕ್ಕೂ ಮಾಕ್ಷಿಮ್ ಒಲಿವೆರಾ ನೀಡುವ ಔಷಧ ಪರಿಣಾಮಕಾರಿ ಕೆಲಸವನ್ನು ಮಾಡುತ್ತದೆ ಎಂದು ಔಷಧವನ್ನು ಪಡೆದುಕೊಂಡವರು ಹೇಳುತ್ತಾರೆ.ಸಾಮಾಜಿಕ ಮನೋಭಾವದಿಂದ ಕೆಲಸವನ್ನು ಮಾಡುತ್ತಿರುವ ಅವರು ರೋಗಿಗಳಿಂದ ನಿರ್ಧಿಷ್ಟವಾಗಿ ಹಣವನ್ನು ಕೇಳಿ ಪಡೆಯುವುದೆ ಇಲ್ಲ ಸ್ವ ಇಚ್ಚೆಯಿಂದ ಕೊಟ್ಟರೆ ಮಾತ್ರ ಪಡೆದುಕೊಳ್ಳುತ್ತಾರೆ ಅವರ ಕೈಗುಣದಿಂದ ಸಾವಿರಾರು ರೋಗಿಗಳು ನಾನಾ ಕಾಯಿಲೆಯಿಂದ ಗುಣ ಮುಖರಾಗಿದ್ದಾರೆ.ಮಾಕ್ಷಿಮ್ ಒಲಿವೆರಾ ಅವರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳಲು ಊರಿನವರು ಮಾತ್ರವಲ್ಲದೆ ದೂರದ ಕೇರಳ,ಗೋವಾ ರಾಜ್ಯದಿಂದಲೂ ಜನರು ಬರುತ್ತಾರೆ.
ನಾಟಿ ಔಷಧ ಪದ್ಧತಿ ತಂದೆಯವರ ಕಾಲದಿಂದ ಬಂದ ಬಳುವಳಿ ಆಗಿದೆ.ಕಳೆದ 25 ವರ್ಷಗಳಿಂದ ನಾಟಿ ಔಷಧವನ್ನು ನೀಡುತ್ತಿದ್ದೇನೆ.ಮೂತ್ರಕೋಶ ಹಾಗೂ ಪಿತ್ತಕೋಶದ ಕಲ್ಲು,ಸರ್ಪಸುತ್ತು,ಬಾವು,ಹೊಟ್ಟೆ ಸಮಸ್ಯೆ,ಹಾವು ಕಡಿತ,ಮೂಲವ್ಯಾದಿ ಸೇರಿದಂತೆ ಹಲವರಾರು ಕಾಯಿಲೆಗಳಿಗೆ ನಾಟಿ ಔಷಧವನ್ನು ನೀಡಲಾಗುತ್ತಿದ್ದು.ಊರ,ಪರಊರಿನವರು ಮಾತ್ರವಲ್ಲದೆ ದೂರದ ಕೇರಳ,ಗೋವಾದಿಂದಲೂ ಬರುತ್ತಾರೆ ಎಂದು ಮಾಕ್ಷಿಮ್ ಒಲಿವೆರಾ ಹೇಳುತ್ತಾರೆ.
ಮಾಕ್ಷಿಮ್ ಒಲಿವೆರಾ ಅವರ ದೂರವಾಣಿ ಸಂಖ್ಯೆ -9535293305

@ಲೇಖನ-ಜಗದೀಶ ದೇವಾಡಿಗ ಮುಳ್ಳಿಕಟ್ಟೆ

Advertisement


Share

Leave a comment

Your email address will not be published. Required fields are marked *

You cannot copy content of this page