ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಅಗ್ನಿನಂದಕ ಪ್ರಾತ್ಯಕ್ಷಿಕೆ ಕಾರ್ಯಾಗಾರ.

ಕುಂದಾಪುರ:ಜೆಸಿಐ ಕುಂದಾಪುರ ಸಿಟಿ,ಜ್ಯೂನಿಯರ್ ಸಿಟಿ ವಿಂಗ್ ಆಯೋಜನೆಯಲ್ಲಿ ಅಗ್ನಿಶಾಮಕ ದಳ ಕುಂದಾಪುರ ಠಾಣೆ ಸಹಭಾಗಿತ್ವದಲ್ಲಿ ಅಗ್ನಿನಂದಕ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹೆಮ್ಮಾಡಿ ಜನತಾ ಕಾಲೇಜಿನ ವಠಾರದಲ್ಲಿ ನಡೆಯಿತು.ಜ್ಯೂನಿಯರ್ ಸಿಟಿ ವಿಂಗ್ ನ ಅಧ್ಯಕ್ಷರಾದ ಜೆಎಪ್ ಡಿ ಕಿರಣ್ ಅಧ್ಯಕ್ಷತೆ ವಹಿಸಿದ್ದರು.ಜ್ಯೂನಿಯರ್ ಜೆಸಿಐ ರಾಷ್ಟ್ರೀಯ ಮಟ್ಟದ ಸಂಯೋಜಕರ ಜೆಎಪ್ ಎಸ್ ರಾಜೇಶ್ ರಾಜನ್,ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರ,ಜನತಾ ಪ್ರೌಢಶಾಲೆ ಹೆಮ್ಮಾಡಿಯ ಮುಖ್ಯ ಶಿಕ್ಷಕರಾದ ಮಂಜು ಕಾಳಾವರ,ಕುಂದಾಪುರ ಸಿಟಿ ಜೆಸಿಐ ಅಧ್ಯಕ್ಷ […]

ನೇತ್ರಾವತಿ ನದಿ ನೀರಿನ ಮಟ್ಟ ಹೆಚ್ಚಳ

ಮಂಗಳೂರು:ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಶನಿವಾರ ಬೆಳಗಿನ ಜಾವ ಹೆಚ್ಚಳವಾಗಿದೆ.ಈ ಭಾಗದಲ್ಲಿ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು,ಸುಮಾರು 8 ಮೀಟರ್ ಎತ್ತರಕ್ಕೆ ಬರುವ ಹೊತ್ತಿಗೆ ನೀರು ಸಮೀಪದ ತಗ್ಗು ಪ್ರದೇಶಗಳಿಗೆ ಹರಿಯಲಾರಂಭಿಸುತ್ತದೆ. ಈಗಾಗಲೇ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದ್ದು, ನದಿ ಸಮೀಪದ ಭಾಗಗಳಲ್ಲಿ ವಾಸಿಸುವವರು ಹಾಗೂ ಪ್ರತಿ ಬಾರಿಯೂ ನೀರಿನ ಮಟ್ಟ ಏರುವ ಸಂದರ್ಭ ತೊಂದರೆಗೊಳಗಾಗುವವರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಆಡಳಿತ ತಿಳಿಸಿದೆ.

ಅಪಾಯಕಾರಿ ಮರದ ಕಾಲು ಸಂಕ ಪರಿಶೀಲಿಸಿದ ಶಾಸಕ ಗುರುರಾಜ್ ಗಂಟಿಹೊಳೆ

ಬೈಂದೂರು:ಯಳಜಿತ್ ಗ್ರಾಮದ ಸಾತೇರಿಯಲ್ಲಿ ಮರದ ದಿಮ್ಮಿಗಳಿಂದ ನಿರ್ಮಿಸಲಾದ ಅಪಾಯಕಾರಿ ಕಾಲು ಸಂಕದಲ್ಲಿ ಸ್ವತಹ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸಂಚಾರ ಮಾಡುವುದರ ಮುಖೇನ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಯಾವುದೇ ಕ್ಷಣದಲ್ಲೂ ಅಪಾಯ ತಂದೊಡ್ಡಬಹುದಾದ ಈ ಕಾಲುಸಂಕದ ಬದಲಾಗಿ ಶೀಘ್ರವೇ ಆಧುನಿಕ ಮಾದರಿಯ ಕಾಲು ಸಂಕ ನಿರ್ಮಿಸಿಕೊಡುವ ಭರವಸೆಯನ್ನು ಶಾಸಕರು ನೀಡಿದ್ದಾರೆ.

You cannot copy content of this page