ಹೆಚ್ಚುವರಿ ಆಧಾರದ ಮೇಲೆ ಹೊಸಾಡು ಶಾಲೆ ದೈಹಿಕ ಶಿಕ್ಷಕರ ವರ್ಗಾವಣೆ:ಶಿಕ್ಷಕರ ನೇಮಕಕ್ಕೆ ಪೋಷಕರ ಆಗ್ರಹ
ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯ ದೈಹಿಕ ಶಿಕ್ಷಣ ಶಿಕ್ಷರನ್ನು ಹೆಚ್ಚುವರಿ ಆಧಾರದ ಮೇಲೆ ಬೇರೆ ಶಾಲೆಗೆಮಾಡಿರುವುದನ್ನು ಖಂಡಿಸಿ,ಶಿಕ್ಷಕರನ್ನು ಮರು ನೇಮಕ ಮಾಡುವಂತೆ ಆಗ್ರಹಿಸಿ ಹೊಸಾಡು ಶಾಲೆಯ ಎಸ್‍ಡಿಎಂಸಿ ಮತ್ತು ಗ್ರಾಮಸ್ಥರ ವತಿಯಿಂದ ಶಿವಮೊಗ್ಗ ಕ್ಷೇತ್ರ ಸಂಸದ ಬಿ.ವೈ.ರಾಘವೇಂದ್ರ ಮತ್ತು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಶುಕ್ರವಾರ ಹೆಮ್ಮಾಡಿಯಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯಲ್ಲಿ 1 ರಿಂದ 8ನೇ ತರಗತಿ ವರೆಗೆ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದೆ ಪ್ರಸ್ತುತ ಶಾಲೆಯಲ್ಲಿ 55 ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.ಶಾಲೆಯಲ್ಲಿ ಇಬ್ಬರು ಸರಕಾರಿ ಶಿಕ್ಷಕರು ಮತ್ತು ಒಂದು ಅತಿಥಿ ಶಿಕ್ಷಕರಿದ್ದು,ಜಿಪಿಟಿ ಶಿಕ್ಷಕರು ಸಹಿತ ಇಬ್ಬರು ಶಿಕ್ಷಕರ ಕೊರತೆ ಇದೆ,ಶಿಕ್ಷಕರ ಕೊರತೆ ನಡುವೆ ಹೆಚ್ಚುವರಿ ಆಧಾರದ ಮೇಲೆ ದೈಹಿಕ ಶಿಕ್ಷಣ ಶಿಕ್ಷರನ್ನು ವರ್ಗಾವಣೆ ಮಾಡಿರುವುದು ಪೋಷಕರ ಆಕ್ರೋಶ ಕಾರಣವಾಗಿದೆ.
ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಕರನ್ನು ನೇಮಕ ಮಾಡುವಂತೆ ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಶಾಲೆ ಎಸ್‍ಡಿಎಂಸಿ ಅಧ್ಯಕ್ಷೆ ರೇಖಾ ಗಣೇಶ್,ವಿಶ್ವನಾಥ್ ಶೆಟ್ಟಿ,ಸುರೇಶ್ ಶೆಟ್ಟಿಗಾರ್,ಸಂತೋಷ ಮೊಗವೀರ,ನಾಗರತ್ನ ಉಪಸ್ಥಿತರಿದ್ದರು.
