ಏಕಥ-2024,ಪ್ರಾಂತೀಯ ಸಮ್ಮೇಳನ ಪ್ರಾಂತ್ಯ-5

ಕುಂದಾಪುರ:ಲಯನ್ಸ್ ಇಂಟರ್ ನ್ಯಾಷನಲ್ ಲಯನ್ ಡಿಸ್ಟ್ರಿಕ್ಟ್ 317 ಸಿ ವತಿಯಿಂದ ಏಕಥ-2024 ಪ್ರಾಂತೀಯ ಸಮ್ಮೇಳನ ಪ್ರಾಂತ್ಯ-5 ಕಾರ್ಯಕ್ರಮ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್ (ಗ್ರೇಸ್ ತೆಕ್ಕಟ್ಟೆಯಲ್ಲಿ ಭಾನುವಾರ ಅದ್ದೂರಿಯಾಗಿ ನಡೆಯಿತು.
ಲಯನ್ಸ್.ರಮಾ ಬೋಳಾರ್ (ಎಂಜಿಎಫ್) ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶೈಕ್ಷಣಿಕ,ಸಾಮಾಜಿಕ ಸೇವಾ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಇನ್ನಷ್ಷು ಸೇವಾ ಕಾರ್ಯಗಳನ್ನು ಮಾಡಲಾಗುವುದೆಂದು ಶುಭಹಾರೈಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು, ಕಿಡ್ನಿ ಪೀಡಿತ ರೋಗಿಗಳಿಗೆ ಧನಸಹಾಯ ನೀಡಲಾಯಿತು . ವಿದ್ಯಾನಿಧಿ ಹಾಗೂ ವಿದ್ಯಾ ಪೋಷಕ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಅನ್ನು ವಿತರಿಸಲಾಯತು. ಕಾಳವರ ವರದರಾಜ ಶೆಟ್ಟಿಯವರುಕೊಡ ಮಾಡಲಿರುವ ನಾಲ್ಕು ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಬ್ಯಾನರ್ ಪ್ರೆಸೆಂಟೇಷನ್ ನಲ್ಲಿ ಭಾಗವಹಿಸಿದ ಹತ್ತು ಕ್ಲಬ್ ನಲ್ಲಿ ಮೊದಲ, ದ್ವಿತೀಯ, ತೃತೀಯ ಸ್ಥಾನ ಪಡೆದ ಕ್ಲಬ್ ಗೆ ಬಹುಮಾನ ನೀಡಲಾಯಿತು.
ರೀಜನ್ ಚೇರ್ ಪರ್ಸನ್ ,ರೀಜನ್ 5 ಪ್ರಾಂತೀಯ ಅಧ್ಯಕ್ಷರಾದ ಲ.ಏಕನಾಥ ಬೋಳಾರ್ (ಎಂಜಿಎಫ್) ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,ಅಶಕ್ತ ಮತ್ತು ಬಡವರ ಮೇಲಿನ ಕಾಳಜಿ ಯಿಂದ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದ್ದು,ಆರೋಗ್ಯ ಸೇರಿದಂತೆ ಶೈಕ್ಷಣಿಕ ಕ್ಷೇತ್ರಕ್ಕೂ ಸಹಕಾರವನ್ನು ನೀಡುತ್ತಾ ಬರಲಾಗುತ್ತಿದೆ.ನಾವು ದುಡಿದ ಹಣದಲ್ಲಿ ಸಮಾಜ ಸೇವೆಗೆ ಒಂದಿಷ್ಟು ಹಣ ಮೀಸಲಿಟ್ಟು ವಿನಿಯೋಗ ಮಾಡಿದಾಗ ಮಾತ್ರ ದುಡಿಮೆಯ ಪ್ರಾಪ್ತಿ ನಮಗೆ ದೊರಕುತ್ತದೆ ಎಂದರು.
ಅಂತರಾಷ್ಟ್ರೀಯ ತರಬೇತುದಾರ , ಮೈಸೂರಿನ ಪರಿವರ್ತನ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿರುವ ಚೇತನ್ ರಾಮ್ ಆರ್.ಎ, ಪ್ರೇರಣಾತ್ಮಕ ದಿಕ್ಸೂಚಿ ಭಾಷಣ ಗೈದರು.
ಈ ಸಂದರ್ಭದಲ್ಲಿ ಬಿ ಐ ಎ ಮೈಸೂರು ಪ್ರಾಂತ್ಯದ ಚೇರ್ಮನ್ ಆಗಿರುವ ಲ.ನಾಗರಾಜ್ ವಿ ಬಾಯಿರಿ ಲಯನ್ಸ್ನ ಆದರ್ಶವನ್ನು ತೆರೆದಿಟ್ಟರು.ಪ್ರಾಂತೀಯ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷರು ಲ.ಬಿ ಅರುಣ್ ಕುಮಾರ್ ಹೆಗ್ಡೆ, ಚೇರ್ಮನ್ ಲ.ರಮಾನಂದ . ಕೆ ಕಾರ್ಯದರ್ಶಿ ಪ್ರಕಾಶ್ ಬೆಟ್ಟಿನ್ , ಖಜಾಂಚಿ ಲ.ದಿನಕರ ಶೆಟ್ಟಿ, ರೀಜನ್ ಸೆಕ್ರೆಟರಿ ಭೋಜರಾಜ ಶೆಟ್ಟಿ, ಅತಿಥೇಯ ಕ್ಲಬ್ಬಿನ ಅಧ್ಯಕ್ಷರಾಗಿರುವ ಲ.ರಾಘವೇಂದ್ರ ಬಸ್ರೂರು,ಜೋನ್ ಚೇರ್ ಪರ್ಸನ್ ಜೋನ್ 1 ಲ.ನವೀನ್ ಕುಮಾರ್ ಶೆಟ್ಟಿ,ಜೋನ್ ಚೇರ್ ಪರ್ಸನ್ ಜೋನ್ 2 ಲ.ಜಗದೀಶ್ ಶೆಟ್ಟಿ ಎಲ್ಲಾ ಪ್ರಾಂತ್ಯದ ಅಧ್ಯಕ್ಷರು , ಹಾಗೂ ಲಯನ್ಸ್ ಕ್ಲಬ್ ಕೋಟೇಶ್ವರ ಸದಸ್ಯರು,ಮತ್ತಿತರರು ಉಪಸ್ಥಿತರಿದ್ದರು.
ಸಮ್ಮೇಳನ ಸಮಿತಿಯ ಚೇರ್ಮನ್ ಇಂಜಿನಿಯರ್ ರಮಾನಂದ ಕೆ ಸ್ವಾಗತಿಸಿ, ,ಲ ವಿಶ್ವನಾಥ ಶೆಟ್ಟಿ ಉಪ್ಪುಂದ ಲ ಜಯಶೀಲಾ ಕಾಮತ್ , ನಿರೂಪಿಸಿದರು ಸಮಿತಿ ಕಾರ್ಯದರ್ಶಿ ಪ್ರಕಾಶ್ ಬೆಟ್ಟಿನ್ ವಂದಿಸಿದರು .ವಿವಿಧ ಲಯನ್ಸ್ ವತಿಯಿಂದ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತು.