ಕೆ.ಎಸ್ ಪ್ರಮೋದ್ ರಾವ್ ಅಭಿಮಾನಿಗಳಿಂದ ಜನ್ಮ ದಿನ ಆಚರಣೆ,ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ರುದ್ರಾಭಿಷೇಕ ಸಲ್ಲಿಕೆ







ಅಭಿಮಾನಿಗಳಿಂದ ಜನ್ಮ ದಿನ ಆಚರಣೆ,ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ರುದ್ರಾಭಿಷೇಕ ಸಲ್ಲಿಕೆ.
(ಗಣ್ಯಾತಿಗಣ್ಯರಿಂದ ಕೆ.ಎಸ್ ಪ್ರಮೋದ್ ರಾವ್ ಗೆ ಶುಭಹಾರೈಕೆ)






ಕುಂದಾಪುರ:ಶೈಕ್ಷಣಿಕ ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರ ಸೇರಿದಂತೆ ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡು ಸಾಮಾಜಿಕ ಕಾರ್ಯಗಳ ಮುಖೇನ ಗುರುತಿಸಿಕೊಂಡಿರುವ ಬೈಂದೂರು ತಾಲೂಕಿನ ಕಂಬದಕೋಣೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಸಂಸ್ಥಾಪಕರಲ್ಲಿ ಒಬ್ಬರಾಗಿರುವ,ಫೌಂಡರ್ ಎಂಜಿಎಂ ಅರ್ಥ್ ಮೂವರ್ಸ್ ನೊಯಿಡಾ,ಆರ್.ಕೆ ಸಂಜೀವ ರಾವ್ ಸ್ಮಾರಕ ದತ್ತಿ ಹಾಗೂ ವಿಧಿಇನ್ಫ್ರಾ ಸೊಲ್ಯೂಷನ್ಸ್ ಪ್ರೈ.ಲಿ ನಿರ್ದೇಶಕರಾದ ಕೆ.ಎಸ್ ಪ್ರಮೋದ್ ರಾವ್ ಜನ್ಮ ದಿನವನ್ನು (ಪ್ರಮೋದ್ ಅಣ್ಣ) ಅವರ ಅಭಿಮಾನಿ ಬಳಗ ಕಂಬದಕೋಣೆ ವತಿಯಿಂದ ಗುರುವಾರ ಆಚರಿಸಲಾಯಿತು.
ಕೆ.ಎಸ್ ಪ್ರಮೋದ್ ರಾವ್ (ಪ್ರಮೋದ್ ಅಣ್ಣ) ಅವರ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳ ಸಂಘದ ವತಿಯಿಂದ ಕಂಬದಕೋಣೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ,ಹಣ್ಣುಕಾಯಿ ಹಾಗೂ ಮಂಗಳಾರತಿ ಸೇವೆಯನ್ನು ಸಲ್ಲಿಸಲಾಯಿತು.ದೇವಳದ ಅರ್ಚಕರಾದ ಮಹಾಬಲೇಶ್ವರ ಭಟ್ ಪೂಜಾ ಕಾರ್ಯಗಳನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಕೆ.ಎಸ್ ಪ್ರಮೋದ್ ರಾವ್ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.