ಇಸ್ರೇಲ್‍ನಲ್ಲಿ ಕರಾವಳಿ ಕನ್ನಡಿಗರು ಸುರಕ್ಷಿತ
ಕುಂದಾಪುರ:ಇಸ್ರೇಲ್ ಸೇನಾಪಡೆ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಕದನ ತೀವೃಗೊಳ್ಳುತ್ತಿರುವ ನಡುವೆ ಕರಾವಳಿ ಭಾಗದಲ್ಲಿ ಆತಂಕ ಎದುರಾಗಿದೆ.ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಭಾಗ ಒಂದರಲ್ಲೇ ಅಂದಾಜು 2000 ಕ್ಕೂ ಅಧಿಕ ಮಂದಿ ಇಸ್ರೇಲ್‍ನಲ್ಲಿ ಉದ್ಯೋಗವನ್ನು ಮಾಡುತ್ತಿದ್ದಾರೆ.ಇಸ್ರೇಲ್‍ನಲ್ಲಿ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಕುಟುಂಬಸ್ಥರಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದ್ದು.ತಮ್ಮ ಮಕ್ಕಳ ಯೋಗ ಕ್ಷೇಮದ ಬಗ್ಗೆ ಚಿಂತಿಸುವಂತೆ ಆಗಿದೆ.

ಯುದ್ದದ ಭೀತಿ ಉಂಟಾಗಿದ್ದ ಇಸ್ರೇಲ್-ಗಾಜಾಪಟ್ಟಿಯಿಂದ ಸುಮಾರು 90 ಕಿ.ಮೀ ದೂರದಲ್ಲಿ ವಾಸಮಾಡುತ್ತಿರುವ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಮೂವತ್ತು ಮುಡಿ ನಿವಾಸಿ ಶಶಿ ಪೂಜಾರಿ ಅವರು ಇಲ್ಲಿ ಹೇಳಿಕೊಳ್ಳುವಂತಹ ಭಯದ ವಾತಾವರಣ ಏನು ಇಲ್ಲಾ.ನಾವೆಲ್ಲ ಸುರಕ್ಷತೆಯಿಂದ ಇದ್ದೇವೆ.ಇಸ್ರೇಲ್ ಸರಕಾರ ದಿಟ್ಟ ತನದಿಂದ ಹಮಾಸ್ ಉಗ್ರರನ್ನು ಸದೆ ಬಡಿಯುವ ಕೆಲಸ ಮಾಡುತ್ತಿದ್ದೆ.ನಾವು ಎಂದಿನಂತೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ಯಾವುದೆ ರೀತಿಯ ಜೀವಕ್ಕೆ ಹಾನಿ ಆಗುವಂತಹ ಭಯದ ವಾತಾವರಣ ವಿಲ್ಲದೆ ನಿರ್ಭೀತಿಯಿಂದ ಇದ್ದೇವೆ.ಗಡಿ ಒಳಗೆ ನುಗ್ಗಿದ ಹಮಾಸ್ ಬಂಡುಕೊರರನ್ನು ಕ್ಲಿಯರ್ ಮಾಡುವಂತ ಕೆಲಸ ಸೇನೆ ಮಾಡುತ್ತಿದೆ.ಯಾರು ಕೂಡ ನಮ್ಮ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ,ನಮ್ಮ ಬಗ್ಗೆ ಕಾಳಜಿಯನ್ನು ವಹಿಸುತ್ತಿರುವ ಭಾರತ ಸರಕಾರ ಮತ್ತು ನಾಡಿನ ಜನತೆಗೆ ಧನ್ಯವಾದವನ್ನು ಅವರು ತಿಳಿಸಿದ್ದಾರೆ.
ಯುದ್ದದ ಭೀತಿಯ ನಡುವೆಯು ಕರಾವಳಿ ಭಾಗದ ಕನ್ನಡಿಗರು ಸುರಕ್ಷತೆ ಯಿಂದ ಇದ್ದಾರೆ ಎನ್ನುವ ವಿಚಾರ ಖುಷಿಯ ಸಂಗತಿ ಆಗಿದೆ.