ಶ್ರೀ ದುರ್ಗಾಂಬಾ ಬಾಡಿ ಬಿಲ್ಡರ್ಸ್ ನೂತನ ವಕ್ರ್ಸ್‍ಶಾಪ್ ಉದ್ಘಾಟನೆ



ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಿಪಾಡಿ- ಗುಹೇಶ್ವರ ರಸ್ತೆ ಮುಖ ಮಂಟಪ ಸಮೀಪ ನೂತನವಾಗಿ ನಿರ್ಮಿಸಿರುವ ಉಮಾನಾಥ ಮತ್ತು ದೇವರಾಜ್ ಗಾಣಿಗ ಅವರ ಮಾಲೀಕತ್ವದ ಶ್ರೀ ದುಗಾರ್ಂಬಾ ಬಾಡಿ ಬಿಲ್ಡರ್ಸ್ ಶುಭಾರಂಭ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ಅದ್ದೂರಿಯಾಗಿ ನಡೆಯಿತು.
ಶ್ರೀ ದುಗಾರ್ಂಬಾ ಬಾಡಿ ಬಿಲ್ಡರ್ಸ್ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಗಣಹೋಮ,ಲಕ್ಷ್ಮೀ ಪೂಜೆಯನ್ನು ನೆರವೇರಿಸಲಾಯಿತು.
ಲಾರಿ,ಇನ್ಸುಲೇಟರ್,ಮಿಲ್ಕ್ ವಾಹನ,ಬೂಲೆರೋ,ಬಸ್ ಮತ್ತು ಮಿನಿ ಬಸ್ ಸೇರಿದಂತೆ ಇನ್ನಿತರ ವಾಹನಗಳ ಬಾಡಿ ವಿನ್ಯಾಸ ಹಾಗೂ ಪೇಂಟಿಂಗ್ ಮತ್ತು ಡೇಟಿಂಗ್,ಸ್ಟಿಕ್ಕರ್ ಕಟಿಂಗ್ ಶ್ರೀ ದುರ್ಗಾಂಬಾ ಬಾಡಿ ಬಿಲ್ಡರ್ಸ್ ವರ್ಕ್ ಶಾಪ್ ಶಾಪ್‍ನಲ್ಲಿ ಮಾಡಲಾಗುತ್ತದೆ.ಕ್ಲಪ್ತ ಸಮಯದಲ್ಲಿ ವಾಹನಗಳ ಕೆಲಸವನ್ನು ಮಾಡಿಕೊಡಲಾಗುತ್ತಿದ್ದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ದುರ್ಗಾಂಬಾ ವರ್ಕ್ ಶಾಪ್ ಭೇಟಿ ನೀಡಿ ತಮ್ಮ ವಾಹನಗಳನ್ನು ಅತ್ಯಾಕರ್ಷಕ ರೀತಿಯಲ್ಲಿ ವಿನ್ಯಾಸವನ್ನು ಮಾಡಿಕೊಳ್ಳಬಹುದಾಗಿದೆ.
ವಿಶ್ವನಾಥ್ ಅವರು ಮಾತನಾಡಿ,ಆಧುನಿಕ ಶೈಲಿಯ ಯಂತ್ರೋಪಕರಣಗಳನ್ನು ಹೊಂದಿರುವ ಶ್ರೀ ದುಗಾರ್ಂಬಾ ಬಾಡಿ ಬಿಲ್ಡರ್ಸ್ ವರ್ಕ್ ಶಾಪ್ ನಮ್ಮ ಪರಿಸರದಲ್ಲಿ ಆರಂಭಗೊಂಡಿರುವುದು ಬಹಳಷ್ಟು ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ.ಬಾಡಿ ಬಿಲ್ಡರ್ಸ್ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳ ಕಾಲದ ಸುರ್ಧಿಘವಾದ ಅನುಭವ ಹೊಂದಿರುವ ಉಮಾನಾಥ ಮತ್ತು ದೇವರಾಜ್ ಅವರ ಅನುಭವ ಸಾಕಷ್ಟು ಪ್ರೌಡಿಮತ್ಯೆಯಿಂದ ಕೂಡಿದ್ದು ನುರಿತ ಕೆಲಸಗಾರರು ಕಾರ್ಯನಿರ್ವಹಿಸಲಿದ್ದಾರೆ.ಯುವಕರ ನವ ಉದ್ಯಮಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಹಿರಿಯ ಶಿಕ್ಷಕರಾದ ಭಾಸ್ಕರ ಗಾಣಿಗ ಮಾತನಾಡಿ,ತಾವು ಮಾಡುತ್ತಿರುವ ಕೆಲಸ ಕಾರ್ಯದ ಬಗ್ಗೆ ಬಹಳಷ್ಟು ಅನುಭವ ಪಡೆದು ನಂತರ ಸ್ವಂತ ಉದ್ಯಮವನ್ನು ಆರಂಭಿಸಿರುವುದರಿಂದ ವಾಹನಗಳ ಕೆಲಸ ಕಾರ್ಯವನ್ನು ಉತ್ತಮವಾದ ರೀತಿಯಲ್ಲಿ ಮಾಡಲಿದ್ದಾರೆ.ಯಾವುದೆ ಒಂದು ಕೆಲಸ ಮಾಡುವಾಗ ಆವೊಂದು ಕ್ಷೇತ್ರದಲ್ಲಿ ಜ್ಞಾನವನ್ನು ಹೊಂದಿರುವುದು ಬಹಳಷ್ಟು ಮಹತ್ವದವಾದ ಅಂಶವಾಗಿದೆ ಎಂದು ಅಭಿಪ್ರಾಯಪಟ್ಟರು.ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ದೊರಕುವಂತಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಉಮಾನಾಥ ಮತ್ತು ದೇವರಾಜ್ ಅವರ ಕುಟುಂಬಸ್ಥರು,ಸ್ನೇಹಿತರು,ಹಿತೈಷಿಗಳು ಉಪಸ್ಥಿತರಿದ್ದರು.ಅರ್ಚಕರು ಧಾರ್ಮಿಕ ಕಾರ್ಯವನ್ನು ನೆರವೇರಿಸಿಕೊಟ್ಟರು.