ಹೊಸಾಡು:ತಹಶೀಲ್ದಾರ್ ಭೇಟಿ,sಸ್ಥಳ ಪರಿಶೀಲನೆ

ಕುಂದಾಪುರ:ಬೈಂದೂರು ವಿಧಾನ ಸಭಾ ಕ್ಷೇತ್ರದ ಹೊಸಾಡು ಗ್ರಾಮದ ಕೇರಿಕೊಡ್ಲು ಸಂಪರ್ಕ ರಸ್ತೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ನಿರಾಶಕ್ತಿ ತೋರಿಸಿದ್ದರಿಂದ ಬೇಸತ್ತ ಅಲ್ಲಿನ ನಿವಾಸಿಗಳು ಮುಂಬರುವ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಬಹಿಷ್ಕರಿಸಿ ಬ್ಯಾನರ್ ಅಳವಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಕುಂದಾಪುರ ತಹಶೀಲ್ದಾರ್ ಶೋಭಾ ಲಕ್ಷ್ಮೀ ಅವರು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರ ಜತೆ ಮಾತುಕತೆ ನಡೆಸಿದು.
ಈ ಸಂದರ್ಭ ಆರ್.ಐ ರಾಘವೇಂದ್ರ ದೇವಾಡಿಗ,ಉಗ್ರಾಣಿ ಕುಶಲ ಪೂಜಾರಿ,ಹೊಸಾಡು ಪಂಚಾಯತ್ ಸಿಬ್ಬಂದಿ ಶಿವಾನಂದ,ಮಾಜಿ ಗ್ರಾ.ಪಂ ಸದಸ್ಯ ಸೀತಾರಾಮ ಶೆಟ್ಟಿ ಕೇರಿಕೊಡ್ಲು ಸ್ಥಳೀಯರಾದ ಕುಸುಮಾ ಶೆಟ್ಟಿ,ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.