ಶ್ರೀ ನೆತ್ರ ಹಾೈಗುಳಿ ಹಾಗೂ ಸಪರಿವಾರ ದೈವಸ್ಥಾನ ಹೊಳ್ಮಗೆ ವಾರ್ಷಿಕ ಹಬ್ಬ,ಗೆಂಡ ಸೇವೆ

Share

Advertisement
Advertisement
Advertisement

ಕುಂದಾಪುರ:ಹಕ್ಲಾಡಿ ಗ್ರಾಮದ ಹೊಳ್ಮಗೆ ಶ್ರೀ ನೆತ್ರ ಹಾೈಗುಳಿ ಹಾಗೂ ಸಪರಿವಾರ ದೈವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ ಗೆಂಡ ಸೇವೆ ಹಾಗೂ ಕೋಲ ಸೇವೆ,ಮಂಗಳಾರತಿ,ಹಣ್ಣುಕಾಯಿ ಸೇವೆ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ ನಡೆಯಿತು.ದೈವವನ್ನು ನಂಬಿದ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನವನ್ನು ಪಡೆದು ಹರಕೆಯನ್ನು ಸಲ್ಲಿಸಿದರು.ಶ್ರೀ ನೆತ್ರ ಹಾೈಗುಳಿ ಹಾಗೂ ಸಪರಿವಾರ ದೈವಗಳ ವಾರ್ಷಿಕ ಹಬ್ಬ ಪ್ರತಿ ವರ್ಷ ಮಾ.14 ರಂದು ಆಚರಣೆಗೊಳ್ಳುತ್ತದೆ.
ಕ್ಷೇತ್ರವನ್ನು ನಂಬಿದ ಕುಟುಂಬಿಕರಾದ ಮುಂಬೈ ಉದ್ಯಮಿ ಮಂಜು ಪೂಜಾರಿ ಅವರು ಮಾತನಾಡಿ,ಅಜೀರ್ಣಾವಸ್ಥೆಯಲ್ಲಿದ್ದ ದೈವಸ್ಥಾನವನ್ನು ಇತ್ತಿಚೆಗೆ ಅಭಿವೃದ್ಧಿಗೊಳಿಸಲಾಗಿದೆ.ದೈವಸ್ಥಾನ ಸಂಪರ್ಕಕ್ಕೆ ರಸ್ತೆ ಸಮಸ್ಯೆ ಎನ್ನುವುದು ಬಹಳಷ್ಟು ವರ್ಷಗಳಿಂದ ಇದೆ.ಕಾಲು ದಾರಿಯಲ್ಲಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಕ್ಷೇತ್ರದ ಅಭಿವೃದ್ಧಿ ಮತ್ತು ಭಕ್ತಾದಿಗಳ ಹಿತ ದೃಷ್ಟಿಯಿಂದ ದೈವಸ್ಥಾನಕ್ಕೆ ಸಂಪರ್ಕ ರಸ್ತೆ ಆಗಬೇಕಾದ ಅಗತ್ಯತೆ ಇದೆ.ಇವೊಂದು ಕಾರ್ಯಕ್ಕೆ ಎಲ್ಲರೂ ಸ್ವಯಂಪ್ರೇರಿತರಾಗಿ ಕೈಜೋಡಿಸಿ ದೈವದ ಮನೆಗೆ ರಸ್ತೆಯನ್ನು ಕಲ್ಪಿಸಲು ಸಹಕರಿಸಬೇಕು ಎಂದು ಕೇಳಿಕೊಂಡರು.
ನೆತ್ರ ಹಾೈಗುಳಿ ದೈವಸ್ಥಾನದಲ್ಲಿ ಪೂರ್ವಜರ ಕಾಲದಿಂದಲೂ ಕೋಲ ಸೇವೆಯನ್ನು ನೆರವೇರಿಸಿಕೊಂಡು ಬರುತ್ತಿರುವ ಸೂರ ಪಾಣಾರ ಕುಟುಂಬದ ಸದಸ್ಯರಾದ ಸುನೀಲ್ ಪಾಣಾರ ಅವರು ಮಾತನಾಡಿ,ಹೋರ್ ಬೊಬ್ಬರ್ಯ ಮತ್ತು ಬಂಟರಗರಡಿ ಹಾಗೂ ನೆತ್ರ ಹಾೈಗುಳಿ ಸನ್ನಿಧಾನವೂ ಏಕ ರೂಪದಲ್ಲಿ ಇರುವಂತಹ ಸನ್ನಿಧಾನವಾಗಿದೆ.ಹೆಚ್ಚು ಕಮ್ಮಿ ಎನ್ನುವುದು ಏನು ಇಲ್ಲಾ.ಕಷ್ಟ ಎಂದು ಬೇಡಿ ಬಂದವರ ಇಷ್ಟಾರ್ಥವನ್ನು ಸಿದ್ಧಿಮಾಡುವಾಗ ನೆತ್ರ ಹಾೈಗುಳಿ ಕಾರಣಿಕ ಶಕ್ತಿ ಅಪಾರವಾದದ್ದು ಎಂದು ಹೇಳಿದರು.
ನೆತ್ರ ಹಾೈಗಳಿ ದೈವಸ್ಥಾನದ ಮುಕ್ತೇಸರರಾದ ಮಾಹಬಲ ಮೆಂಡನ್ ಮಾತನಾಡಿ,ನೆತ್ರ ಹಾೈಗಳಿ ದೈವಸ್ಥಾನದ ಆಗು ಹೋಗುಗಳು ಹೋರ್ ಬೊಬ್ಬರ್ಯ ದೈವಸ್ಥಾನದ ವತಿಯಿಂದಲೇ ನಡೆಯುತ್ತದೆ.ವರ್ಷಂಪ್ರತಿ ನಡೆಯುವ ಕೋಲ ಸೇವೆ ಗೆಂಡ ಸೇವೆ,ಹಾಲು ಹಬ್ಬ ಸೇವೆ ಹೋರ್ ಬೊಬ್ಬರ್ಯ ದೈವಸ್ಥಾನದ ವತಿಯಿಂದಲೆ ನಡೆಯುವಂತಹದ್ದು ಆಗಿದೆ.ಈ ಭಾಗದಲ್ಲಿರುವ ಮೂರು ದೈವಸ್ಥಾನಗಳ ಹಬ್ಬ ಒಂದೆ ದಿನ ನಡೆಯುವುದು ವಾಡಿಕೆ ಆಗಿದೆ ಎಂದು ಹೇಳಿದರು.ನೆತ್ರ ಹಾೈಗುಳಿ ನಂಬಿದ ಕುಟುಂಸ್ಥರಿಗೆ ಒಳಿತನ್ನು ಮಾಡಲಿ ಎಂದು ಹಾರೈಸಿದರು.
ನೆತ್ರ ಹಾೈಗುಳಿ ದೈವಸ್ಥಾನದ ಪಾತ್ರಿಗಳಾದ ರಾಘವೇಂದ್ರ ಅವರು ಮಾತನಾಡಿ,ದೈವಸ್ಥಾನದಲ್ಲಿ ಬಾವಿ ಹಾಗೂ ಸ್ನಾನ ಗ್ರಹ ಆಗಬೇಕಾಗಿದೆ.ದೈವಸ್ಥಾನದ ಎದುರುಗಡೆ ಇಂಟರ್‍ಲಾಕ್ ಅಳವಡಿಕೆ ಕೂಡ ಬಾಕಿ ಇದೆ.ದೈವಸ್ಥಾನದ ಅಭಿವೃದ್ಧಿಗೆ ಭಕ್ತಾದಿಗಳು ಸಹಕರಿಸಬೇಕು ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಜ್ಯೋತಿ ಮಂಜು ಪೂಜಾರಿ,ರಾಜೀವ ಪೂಜಾರಿ ಗುಜ್ಜಾಡಿ,ಪ್ರವೀಣ್ ಪೂಜಾರಿ ಹೊಳ್ಮಗೆ,ಅರ್ಚಕರಾದ ರಾಜ ಸಸಿಹಿತ್ಲು,ನಾಗು ಪೂಜಾರಿ,ಗ್ರಾಮಸ್ಥರು,ಭಕ್ತಾದಿಗಳು ಉಪಸ್ಥಿತರಿದ್ದರು.ದೈವಸ್ಥಾನದ ವಾರ್ಷಿಕ ಸೇವೆ ವಿಜೃಂಭಣೆಯಿಂದ ಜರುಗತು.

ವರದಿ:ಜಗದೀಶ ದೇವಾಡಿಗ
ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಬಿತ್ತರಿಸಲು ಸಂಪರ್ಕಿಸಿ:-9916284048

Advertisement


Share

Leave a comment

Your email address will not be published. Required fields are marked *

You cannot copy content of this page