ಮರವಂತೆ:ಶ್ರೀ ವರಾಹ ಜಯಂತಿ ಉತ್ಸವ ಕಾರ್ಯಕ್ರಮ

ಬೈಂದೂರು:ಮರವಂತೆ ಶ್ರೀಕ್ಷೇತ್ರ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕಾಲಂಪ್ರತಿ ನಡೆಯುವ ವರಾಹ ಜಯಂತಿ ಉತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪ್ರದಾಯ ಬದ್ಧವಾಗಿ ನಡೆಯಿತು.
ವರಾಹ ಜಯಂತಿ ಕಾರ್ಯಕ್ರಮದ ಅಂಗವಾಗಿ ಶ್ರೀಕ್ಷೇತ್ರದಲ್ಲಿ ವರಾಹ ಹೋಮ,ಮಹಾ ಅನ್ನಸಂತರ್ಪಣೆ,ಭಜನಾ ಕಾರ್ಯಕ್ರಮ ಜರುಗಿತು.ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಂ ನಾಯಕ ಮತ್ತು ಸದಸ್ಯರು,ದೇವಳದ ಅರ್ಚಕರು,ಉಪಾದಿವಂತರು,ಸಿಬ್ಬಂದಿಗಳು,ಗ್ರಾಮಸ್ಥರು ಹಾಗೂ ಸೇವಾಕರ್ತರಾದ ಪಿ ಮಹೇಶ್ ಬೆಂಗಳೂರು(ಚಿತ್ತೂರು,ಆಂಧ್ರಪ್ರದೇಶ) ಉಪಸ್ಥಿತರಿದ್ದರು.