ನಾಡಿನೆಲ್ಲೆಡೆ ಗಣೇಶ ಚತುರ್ಥಿ ಹಬ್ಬ ಸಂಭ್ರಮದಿಂದ ಆಚರಣೆ

ಕುಂದಾಪುರ:ಪ್ರಥಮ ಪೂಜಿತ ವಿಘ್ನ ನಿವಾರಕನಾದ ಗಣೇಶನನ್ನು ಆರಾಧಿಸದ ವ್ಯಕ್ತಿಯಿಲ್ಲ ಎಲ್ಲಾ ಜಾತಿ ಜನಾಂಗದವರು ಗಣೇಶನನ್ನು ಪೂಜಿಸುತ್ತಾರೆ.ನಮ್ಮ ಬಯಕೆಗಳ ಈಡೇರಿಕೆಗಾಗಿ ಗಜಮುಖನ ಮೊರೆ ಹೋಗುತ್ತೇವೆ.ಸಂಗೀತ,ನೃತ್ಯ,ಚಿತ್ರ,ಶಿಲ್ಪ,ನಾಟಕ,ಯಕ್ಷಗಾನ,ಶುಭಕಾರ್ಯ,ದೇವತಾ ಕಾರ್ಯಗಳ ಆರಂಭಿಕ ಹಂತವಾಗಿ ಗಣೇಶನಿಗೆ ಪೂಜೆ ಸಲ್ಲಿಸಿ ಅವನ ಸ್ತುತಿಸಿಯೇ ಕಾರ್ಯಾರಂಭ ಮಾಡುತ್ತೇವೆ.
ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ದಿನ ಆಚರಿಸಲಾಗುವ ಗಣೇಶ ಚುತಿರ್ಥಿ ಗಣೇಶ ಹುಟ್ಟಿದ ದಿನ ಎಂದು ಪುರಾಣದ ಪ್ರಕಾರ ನಂಬಲಾಗಿದೆ.ನಾಡಿನಾದ್ಯಂತ ಗಣೇಶ ಚುತುರ್ಥಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು.ನಾನಾ ಕಡೆಗಳಲ್ಲಿ ಗಣೇಶ ದೇವರ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದ್ದು.ಚೌತಿ ಹಬ್ಬ ಸಡಗರದಿಂದ ಆಚರಣೆಗೊಳ್ಳುತ್ತಿದೆ.



















































































































































































































































































































































































































































































































































































































































































































































































































































































































































































































































































































































































































































































































































































































































































