ಪಡುಕೋಣೆ:ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

Share

Advertisement
Advertisement
Advertisement
https://youtu.be/4XsNtwWba2c

ಕುಂದಾಪುರ:ಬೈಂದೂರು ತಾಲೂಕಿನ ಪಡುಕೋಣೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಜಿ ಫೌಂಡೇಶನ್, ಕುಂದಾಪುರ ಇವರ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಉಡುಪಿ ಪ್ರಾಥಮಿಕ ಆರೋಗ್ಯ ಕೇಂದ್ರ, ನಾಡ, ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮಂಗಳೂರು ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಡುಕೋಣೆ, ಶ್ರೀ ಮಹಾವಿಷ್ಣು ಫ್ರೆಂಡ್ಸ್ ಸರ್ಕಲ್, ಪಡುಕೋಣೆ ಫ್ರೆಂಡ್ಸ್ ಪಡುಕೋಣೆ, ವಿಶ್ವ ದೇವಾಡಿಗ ಮಹಾ ಮಂಡಲ ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ಪಡುಕೋಣೆ ಎಜುಕೇಶನ್ & ಸ್ಪೋಟ್ಸ್ ಪ್ರಮೋಟರ್ಸ್, ನಾಡ, ಜನ ಶಕ್ತಿ ಸೇವಾ ಟ್ರಸ್ಟ್ (ರಿ.), ನಾಡ ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ನಡೆಯಿತು.

ಉದ್ಯಮಿ ಡಾ.ವಿಜಯಕೃಷ್ಣ ಪಡುಕೋಣೆ ಅವರು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ,ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲರಿಗೂ ಅಗತ್ಯವಾಗಿದ್ದು,ಕಾಲ ಕಾಲಕ್ಕೆ ಸೂಕ್ತವಾದ ತಪಾಸಣೆ ಮಾಡಿಕೊಂಡಾಗ ಮಾತ್ರ ಪ್ರಾಥಮಿಕ ಹಂತದಲ್ಲಿಯೇ ಆರೋಗ್ಯದ ಗುಣಲಕ್ಷಣಗಳನ್ನು ಪತ್ತೆ ಹಚ್ಚಬಹುದಾಗಿದೆ.ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಶಿಬಿರಗಳನ್ನು ಆಯೋಜಿಸುದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು.

ಎಲ್.ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ನಾಗರಾಜ ಡಿ ಪಡುಕೋಣೆ ಮಾತನಾಡಿ,ಸಾಮಾಜಿಕ,ಶೈಕ್ಷಣಿಕ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಬರಲಾಗುತ್ತಿದ್ದು,ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಇವೊಂದು ಆರೋಗ್ಯ ಶಿಬಿರ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.ಸಾಮಾಜಿಕ ಜಾಲತಾಣಗಳನ್ನು ಸದುಪಯೋಗ ಪಡಿಸಿಕೊಂಡು ಸಣ್ಣ ಸಣ್ಣ ವಾಟ್ಸ್ ಆ್ಯಪ್ ಗ್ರೂಪ್ ನಿಂದಲೂ ಜನ ಸೇವಾ ಕಾರ್ಯಗಳನ್ನು ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಕುಂದಾಪುರ ತಾಲೂಕು ಆರೋಗ್ಯಧಿಕಾರಿ ಡಾ.ಪ್ರೇಮಾನಂದ ಮಾತನಾಡಿ,ಆಯುಷ್ಮಾನ್ ಕಾರ್ಡ್ ಮಹತ್ವ ಮತ್ತು ಆರೋಗ್ಯ ಶಿಬಿರದ ಕುರಿತು ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಜನಶಕ್ತಿ ಸೇವಾ ಟ್ರಸ್ಟ್ ಫಿಲಿಪ್ ಡಿಸಿಲ್ವ,ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಮರಿ,ನಾಟಿ ವೈದ್ಯ ಮಾಕ್ಸಿಮ್ ಓಲವೇರಾ ಆನಗೋಡು ತ್ರಾಸಿ,ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ಸ್ಥಾಪಕ ಗಣೇಶ್ ಶೇರಿಗಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಿ,ಗೌರವಿಸಲಾಯಿತು.

ಕುಂದಾಪುರ ಉಪವಿಭಾಗೀಯ ಸರಕಾರಿ ಆಸ್ಪತ್ರೆಯ ವೈದ್ಯಕೀಯ ತಜ್ಜ ಡಾ.ನಾಗೇಶ್,ದೇವಾಡಿಗ ಅಕ್ಷಯ ಕಿರಣ ಪೌಂಡೇಶನ್ ಎಂ.ಡಿ.ಮಧುಕರ ದೇವಾಡಿಗ,ದೇವಾಡಿಗ ವಿಶ್ವ ಮಹಾ ಮಂಡಲದ ಉಪಾಧ್ಯಕ್ಷ ಡಾ.ದೇವರಾಜ್ ಕೆ,ಪಡುಕೋಣೆ ಎಜುಕೇಶನ್ ಹಾಗೂ ಸ್ಪೋಟ್ರ್ಸ್ ಪ್ರಮೋಟರ್ಸ ನಾಡ ಅಧ್ಯಕ್ಷ ಡಾಲ್ಫಿ ಡಿಸಿಲ್ವ,ಪಡುಕೋಣೆ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಪೂಜಾರಿ,ಹಿರಿಯ ಸಂಶೋಧನಾ ವಿಜ್ಜಾನಿ ಪೂರ್ಣಿಮಾ ದಯಾನಂದ ದೇವಾಡಿಗ,ನಾಡ ಗ್ರಾ.ಪಂ.ಸದಸ್ಯ ಅರವಿಂದ ಪೂಜಾರಿ,ರಘರಾಮ ದೇವಾಡಿಗ ಆಲೂರು,ಕುಸುಮಾ ನಾಗರಾಜ ಪಡುಕೋಣೆ,ಡಾ.ರೋಹನ್ ಉಪಸ್ಥಿತರಿದ್ದರು.ನಾಗರಾಜ ಡಿ ಪಡುಕೋಣೆ ಸ್ವಾಗತಿಸಿದರು.ವೈಸ್ ಪ್ರಿನ್ಸಿಪಾಲ್ ರಾಮ ದೇವಾಡಿಗ ನಿರೂಪಿಸಿದರು.ಪುರುಷೋತ್ತಮ ದಾಸ್ ವಂದಿಸಿದರು.ನೂರಾರು ಜನರು ಆರೋಗ್ಯ ಶಿಬಿರಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು,ಆರೋಗ್ಯ ಸಿಬ್ಬಂದಿಗಳು ಹಾಜರಿದ್ದರು.

Advertisement


Share

Leave a comment

Your email address will not be published. Required fields are marked *

You cannot copy content of this page