ನಿಂತಿದ್ದ ಟಿಪ್ಪರ್ ಗೆ ಬೊಲೆರೋ ಡಿಕ್ಕಿ ಚಾಲಕ ಗಂಭೀರ
![](https://kundapurtimes.com/wp-content/uploads/2024/05/WhatsApp-Image-2024-05-18-at-8.08.37-PM.jpeg)
ಉಡುಪಿ:ರಾಷ್ಟ್ರೀಯ ಹೆದ್ಧಾರಿ 66 ರ ಕೊಪ್ಪಲಂಗಡಿ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟಿಪ್ಪರ್ ವಾಹನಕ್ಕೆ ಬೊಲೆರೋ ವಾಹನವೊಂದು ಹಿಂದಿನಿಂದ ಡಿಕ್ಕಿಹೊಡೆದಿದೆ.ಅಪಘಾತದಲ್ಲಿ ಬೊಲೆರೋ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಮಂಗಳೂರಿನಿಂದ ಉಡುಪಿಯತ್ತ ಚಲಿಸುತ್ತಿದ್ದ ಬೊಲೆರೋ ವಾಹನ ರಸ್ತೆ ಬದಿ ನಿಂತಿದ್ದ ಟಿಪ್ಪರ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು,ಅಪಘಾತದ ರಭಸಕ್ಕೆ ಬೊಲೆರೋ ವಾಹನದ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಚಾಲಕನನ್ನು ಸ್ಥಳೀಯರು ತಕ್ಷಣ ಉಡುಪಿಯ ಆಸ್ಪತ್ರೆಗೆ ರವಾನಿಸಿದ್ದಾರೆ.