ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಏಪ್ರಿಲ್.15 ರಂದು ಶುಭಾರಂಭಗೊಳ್ಳಲಿದೆ
ಕುಂದಾಪುರ:ಕರಾವಳಿ ಮತ್ತು ಮಲೆನಾಡು ಪ್ರದೇಶದೊಂದಿಗೆ ಸಮ್ಮಿಲನಗೊಂಡಿರುವ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಧುನಿಕ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡಿರುವ ಶಿಕ್ಷಣ ಕ್ರಾಂತಿ ಹರಿಕಾರ ಎಂದೆ ಮನೆ ಮಾತಾಗಿರುವ ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರು ಮತ್ತು ಪ್ರಿನ್ಸಿಪಾಲ್ ಗಣೇಶ ಮೊಗವೀರ ಅವರ ಸಾರಥ್ಯದಲ್ಲಿ ಹಾಗೂ ಸಮರ್ಪಣನ ಎಜುಕೇಶನ್ ಟ್ರಸ್ಟ್ ಹೆಮ್ಮಾಡಿ ಆಡಳಿತದಲ್ಲಿ ಹೊಸ ಕಲ್ಪನೆಯೊಂದಿಗೆ ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಏಪ್ರಿಲ್ 15 ರ ಸೋಮವಾರ ದಂದು ಶುಭಾರಂಭಗೊಳ್ಳಲಿದೆ.
ಈಗಾಗಲೇ ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜನ್ನು ಮುನ್ನೆಡೆಸುವುದರ ಮೂಲಕ ಯಶಸ್ವಿಯಾಗಿರುವ ಗಣೇಶ ಮೊಗವೀರ ಅವರು ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಚುಕ್ಕಾಣಿಯನ್ನು ಹಿಡಿದಿದ್ದಾರೆ.ವಿಶಿಷ್ಟ ಆಲೋಚನೆಯೊಂದಿಗೆ ಆರಂಭಿಸಿರುವ ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಆರಂಭದ ಎರಡೆ ವರ್ಷದಲ್ಲಿಯೆ ಶೇಕಡಾ 100 ಫಲಿತಾಂಶವನ್ನು ಗಳಿಸುವುದರ ಮೂಲಕ ಕುಂದಾಪುರ ತಾಲೂಕಿನಲ್ಲಿ ಐತಿಹಾಸಿಕ ದಾಖಲೆಯನ್ನು ಸೃಷ್ಟಿಸಿದೆ.ಶಿಕ್ಷಣ,ಕಲೆ,ಸಾಹಿತ್ಯ,ಕ್ರೀಡೆ,ಮನೋರಂಜನೆ ವಿಷಯದಲ್ಲಿ ದಾಖಲೆ ಪ್ರಶಸ್ತಿಗಳನ್ನು ಗಳಿಸುವುದರ ಮುಖೇನ ಕಾಲೇಜಿನ ವಿದ್ಯಾರ್ಥಿಗಳು.ಶಿಕ್ಷಣದ ಜತಗೆ ಪಠ್ಯೇತರ ವಿಚಾರದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿರುವ ಗಣೇಶ ಮೊಗವೀರ ಅವರ ಮುಂದಾಳತ್ವದಲ್ಲಿ ನಾವುಂದ ಶುಭದಾ ಆಂಗ್ಲ ಮಾಧ್ಯಮ ಶಾಲೆ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ.
ಬಡತನದಲ್ಲಿ ಹುಟ್ಟಿದ ಗಣೇಶ ಮೊಗವೀರ ಅವರಿಗೆ ಕಷ್ಟಗಳು ಏನು ಹೊಸತಲ್ಲ,ಬದುಕಿಗೆ ಶಿಕ್ಷಣವೆ ಮುಖ್ಯ ಎಂದು ಭಾವಿಸಿರುವ ಅವರು ಕಷ್ಟದ ದಿನಗಳಲ್ಲಿಯೂ ಶಾಲೆಯ ಮೆಟ್ಟಿಲ್ಲನೇರಿ ಉನ್ನತ ಶಿಕ್ಷಣ ಪಡೆಯುವುದರ ಮೂಲಕ.ಊರಿನ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು ಎನ್ನುವುದು ಅವರ ಮಹಾದಾಶೆ ಆಗಿದೆ.ಆವೊಂದು ನಿಟ್ಟಿನಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪೂರ್ವ ಕಾಲೇಜನ್ನು ಆರಂಭಿಸುವುದರ ಜತೆಗೆ ನಾವುಂದ ಶುಭದಾ ಆಂಗ್ಲ ಮಾಧ್ಯಮ ಶಾಲೆಯನ್ನು ಮುನ್ನೆಡೆಸಲು ಮುಂದುಡಿ ಇಟ್ಟಿದ್ದಾರೆ.ಈಗಾಲೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಗಳಿಸಿರುವ ಶುಭದಾ ಆಂಗ್ಲ ಮಾಧ್ಯಮ ಶಾಲೆಗೆ ಗಣೇಶ ಮೊಗವೀರ ಸಾರಥ್ಯದಲ್ಲಿ ಇನ್ನಷ್ಟು ಹೊಳಪು ಬರಲಿದೆ.
ಹೆಮ್ಮಾಡಿ ಜನತಾ ಕಾಲೇಜಿನ ಅಧ್ಯಕ್ಷರು ಪ್ರಿನ್ಸಿಪಾಲ್ ಗಣೇಶ ಮೊಗವೀರ ಅವರು ಮಾತನಾಡಿ,ಶುಭದಾ ಆಂಗ್ಲ ಮಾಧ್ಯ ಶಾಲೆ ಕಿರಿ ಮಂಜೇಶ್ವರ ಇವೊಂದು ಶೈಕ್ಷಣಿಕ ವರ್ಷದಲ್ಲಿ ಜನತಾ ಕಾಲೇಜು ಹೆಮ್ಮಾಡಿ ಸಮರ್ಪಣ ಎಜುಕೇಶನ್ ಟ್ರಸ್ಟ್ ವತಿಯಿಂದ ಇವೊಂದು ಶೈಕ್ಷಣಿಕ ವರ್ಷದಲ್ಲಿ ಆರಂಭಗೊಳ್ಳಲಿದೆ ಎಂದರು.ಹಲವಾರು ಬದಲಾವಣೆ ಗಳೊಂದಿಗೆ ಶಾಲೆ ಆರಂಭಗೊಳ್ಳಲಿದೆ.ಇವೊಂದು ಭಾಗದಲ್ಲಿ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಲಿ ಕಂಕಣ ಬದ್ದರಾಗಿದ್ದೇವೆ ಎಂದು ಹೇಳಿದರು.
ವರದಿ:-ಜಗದೀಶ ದೇವಾಡಿಗ
ನಮ್ಮ ಜಾಲತಾಣದಲ್ಲಿ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ:-9916284048
