ಸೌತ್ ಕೆನರಾ ಫೋಟೋಗ್ರಾಫರ್ಸ್,ವಾರ್ಷಿಕ ಕ್ರೀಡಾಕೂಟ
ಕುಂದಾಪುರ:ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ಕುಂದಾಪುರ ಮತ್ತು ಬೈಂದೂರು ವಲಯದ ವಾರ್ಷಿಕ ಕ್ರೀಡಾ ಕೂಟ ಕುಂದಾಪುರ ಗಾಂಧಿ ಮೈದಾನದಲ್ಲಿ ಭಾನುವಾರ ನಡೆಯಿತು.
ಉದ್ಯಮಿ ದಿನಕರ್ ನಾಯ್ಕ್ ಬೆಳಂಜೆ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ,ಕಷ್ಟ ಪಟ್ಟು ದುಡಿದ ಹಣದಲ್ಲಿ ಸ್ವಲ್ಪಂಶವನ್ನು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದೀರಿ.ವೃತೀಯ ಜಂಜಾಟದ ನಡುವೆಯೂ ವರ್ಷಕ್ಕೊಮ್ಮೆ ಕ್ರೀಡಾ ಕೂಟವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಸದಸ್ಯರೊಳಗೆ ಸಾಮಾರಸ್ಯ ಮುಡಿಸುವ ಪ್ರಯತ್ನ ಸಂಘಟನೆಯಿಂದ ಆಗುತ್ತಿದೆ ಎಂದರು.ಇದೇ ಸಂಧರ್ಭದಲ್ಲಿ ಇಂಡಿಯನ್ ಪ್ಯಾರಾ ಕ್ರಿಕೆಟ್ ಆಟಗಾರ ಪ್ರಥ್ವಿರಾಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಕುಂದಾಪುರ ಬೈಂದೂರು ವಲಯ ಅಧ್ಯಕ್ಷ ದೊಟ್ಟಯ್ಯ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಲಹಾ ಸಮಿತಿ ಅಧ್ಯಕ್ಷ ನಾಗರಾಜ್ ರಾಯಪ್ಪನ ಮಠ,ಕಾರ್ಯದರ್ಶಿ ಸುರೇಶ್ ಜಮದಗ್ನಿ,ಸಂಘದ ಮಾಜಿ ಅಧ್ಯಕ್ಷ ರಾಜ ಮಠದ ಬೆಟ್ಟು,ಅಮೃತ್ ಬೀಜಾಡಿ ಛಾಯಾ ಕಾರ್ಯದರ್ಶಿ ಎಸ್ ಕೆಪಿಎ,ಕ್ರೀಡಾ ಕಾರ್ಯದರ್ಶಿ ಸಿರಿ ಕುಂದಾಪುರ,ದಿನೇಶ್ ನಾಗೂರು,ರಾಘವೇಂದ್ರ ಬಸ್ರೂರು ಉಪಸ್ಥಿತರಿದ್ದರು.ನಾಗರಾಜ್ ರಾಯಪ್ಪನ ಮಠ ಸ್ವಾಗತಿಸಿದರು,ಸುರೇಶ್ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ.ಸುರೇಶ್ ಜಮದಗ್ನಿ ವಂದಿಸಿದರು.























































































































































































































































































































































































































































































































































































































































































































































































































































































































































































































































































































































































































































































































































































































































































