ವಿನಿಶ್ ಕುಮಾರ್ ಗೆ ಪ್ರಥಮ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 4ನೇ ತರಗತಿ ವಿದ್ಯಾರ್ಥಿ ವಿನಿಶ್ ಕುಮಾರ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.ಕಾವ್ರಾಡಿಯ ವಿಜಯ್ ಕುಮಾರ್ ಮತ್ತು ಶಿಕ್ಷಕಿ ಅನುಷಾ ಸಿ.ಬಂಗೇರ ದಂಪತಿಯ ಪುತ್ರ, ಪ್ರಸನ್ನ ಕೆ.ಬಿ,ಸುನೀತಾ ಹಾಗೂ ಮಹಾಲಕ್ಷ್ಮೀ ಅವರು ತರಬೇತಿಯನ್ನು ನೀಡಿದ್ದರು.