ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಒತ್ತಡ ನಿರ್ವಹಣೆ ಕುರಿತು ಕಾರ್ಯಕ್ರಮ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದಿಂದ ವತಿಯಿಂದ ಒತ್ತಡ ನಿರ್ವಹಣೆ ಎನ್ನುವ ವಿಚಾರದ ಕುರಿತು ಕಾರ್ಯಕ್ರಮ ನಡೆಯಿತು.
ಡಾ ಎ.ವಿ ಬಾಳಿಗಾ ಆಸ್ಪತ್ರೆ ಉಡುಪಿ ಆಪ್ತ ಸಮಾಲೋಚಕಿ ಪದ್ಮರಾಘವೇಂದ್ರ ಅವರು ವಿದ್ಯಾರ್ಥಿಗಳಿಗೆ ಒತ್ತಡ,ಖಿನ್ನತೆ ನಿರ್ವಹಣೆಯ ಕುರಿತಾಗಿ ಹಾಗೂ ಮಾನಸಿಕ ಒತ್ತಡ, ಹಿಡಿತ ಶೈಕ್ಷಣಿಕವಾಗಿ ಕ್ಷೇತ್ರದಲ್ಲಿ ಮನಸ್ಥಿತಿಯನ್ನು ಹೇಗೆ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂಬುವ ಕುರಿತು ಅರಿವು ಮೂಡಿಸಿದರು.
ಕಾಲೇಜಿನ ಸಂಸ್ಥಾಪಕರಾದ ಸುಬ್ರಹ್ಮಣ್ಯ ಅವರು ಮಾತನಾಡಿ,ಶಿಸ್ತು ಸಮಯ ಪಾಲನೆಯ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾಲೇಜಿನ ನಿರ್ದೇಶಕಿ ಮಮತಾ,ವೈಸ್ ಪ್ರಿನ್ಸಿಪಾಲ್ ಸುಜಾತ,ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶೈಲಾ,ನಿರ್ವಹಣಾ ವಿಭಾಗದ ಮುಖ್ಯಸ್ಥೆ ಗೀತಾ ಹಾಗೂ ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು, ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿ ಝಮ್ರಾನ್ ನಿರೂಪಿಸಿದರು, ರೊಲಿಟಾ ಸ್ವಾಗತಿಸಿದರು, ಧನ್ಯಾಶ್ರೀ ಅತಿಥಿಗಳನ್ನು ಪರಿಚಯಿಸಿದರು,ಫಲಾ ವಂದಿಸಿದರು.