ಧರೆಗುರುಳಿದ ಹೆಮ್ಮಾಡಿ ಸರಕಾರಿ ಶಾಲೆ ಕಟ್ಟಡ

Share

Advertisement
Advertisement
Advertisement

ಕುಂದಾಪುರ:ಸರಕಾರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಬಾರಿ ಮಳೆಗೆ ಶನಿವಾರ ರಾತ್ರಿ ಧರೆಗುರುಳಿದೆ.ಶಾಲೆ ರಜಾ ದಿನವಾದ್ದರಿಂದ ಬಾರಿ ಅನಾಹುತ ತಪ್ಪಿದ್ದು ಮಕ್ಕಳ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಶತಮಾನದ ಇತಿಹಾಸವನ್ನು ಹೊಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯ ಕಟ್ಟಡ ದುರ್ಬಲವಾಗಿದ್ದು ಕಟ್ಟಡವನ್ನು ತೆರವುಗೊಳಿಸುವಂತೆ ವರ್ಷದ ಹಿಂದೆ ಶಿಕ್ಷಣ ಇಲಾಖೆಗೆ ಮನವಿಯನ್ನು ಸಲ್ಲಿಸಲಾಗಿತ್ತು.ಮನವಿಗೆ ಸ್ಪಂದನೆ ಮಾಡದ ಶಿಕ್ಷಣ ಇಲಾಖೆ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ತೆರವುಗೊಳಿಸುವ ಗೋಜಿಗೆ ಹೋಗಿರಲಿಲ್ಲ.
ಏಳು ಕೋಣೆಗಳನ್ನು ಹೊಂದಿರುವ ಉದ್ದನೆಯ ಶಾಲಾ ಕಟ್ಟಡದ ಮೂರು ಕೋಣೆಗಳು ಶಿಥಿಲಗೊಂಡಿದ್ದವು.ಮಳೆಯ ಹೊಡೆತಕ್ಕೆ ಶಿಥಿಲಗೊಂಡಿದ್ದ ಎರಡು ಕೋಣೆಗಳು ಧರೆಗೆ ಉರುಳಿ ಬಿದ್ದಿದೆ,ಇನ್ನೊಂದು ಕೋಣೆ ಬೀಳುವ ಹಂತದಲ್ಲಿದೆ.ಶಿಥಿಲಗೊಂಡಿದ್ದ ಪಕ್ಕದ ಕೋಣೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ದಿನ ಪಾಠ ಪ್ರವಚನವನ್ನು ಮಾಡಲಾಗುತ್ತಿತ್ತು.ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ಧರೆಗೆ ಉರುಳಿ ಬಿದ್ದಿರುವುದು ಭಾನುವಾರ ಬೆಳಿಗ್ಗೆ ಗೋಚರಕ್ಕೆ ಬಂದಿದೆ.ರಜಾ ದಿನದಲ್ಲಿ ಕಟ್ಟಡ ಬಿದ್ದಿರುವುದರಿಂದ ಮಕ್ಕಳ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಶಾಲೆಯ ಕಟ್ಟಡದ ಮೂರು ಕೋಣೆಗಳು ಶಿಥಿಲಗೊಂಡಿದ್ದು ದುರ್ಬಲ ಕಟ್ಟಡವನ್ನು ತೆರವು ಮಾಡುವಂತೆ ಗ್ರಾಮಸ್ಥರು ಶಿಕ್ಷಣ ಇಲಾಖೆಗೆ ಮನವಿಯನ್ನು ನೀಡಿದ್ದರು.ಸಾರ್ವಜನಿಕರ ಮನವಿಗೆ ಶಿಕ್ಷಣ ಇಲಾಖೆ ಯಾವುದೇ ರೀತಿ ಸ್ಪಂದನೆ ತೊರದೆ ನಿರುತ್ಸಾಹದ ಧೋರಣೆ ತಾಳಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಶಿಕ್ಷಣ ಇಲಾಖೆ ಬೇಜವಾಬ್ದಾರಿ ತನದಿಂದ ಕಟ್ಟಡ ನೆಲಕ್ಕೆ ಉರುಳಿ ಬಿದ್ದಿದೆ ರಜಾ ದಿನವಾದ್ದರಿಂದ ಅದೃಷ್ಟವಶಾತ್ ಮಕ್ಕಳು ಪಾರಾಗಿದ್ದರೆ ಎಂದು ಮಕ್ಕಳ ಪೋಷಕರು ಹೇಳುತ್ತಾರೆ.

Advertisement


Share

Leave a comment

Your email address will not be published. Required fields are marked *

You cannot copy content of this page