ಪರೀಕ್ಷಾ ಪೂರ್ವ ತಯಾರಿ ತರಬೇತಿ ಶಿಬಿರ

ಕುಂದಾಪುರ:ಲಯನ್ಸ್ ಕ್ಲಬ್ ನಾವುಂದ,ಜೆ.ಸಿ ಉಪ್ಪುಂದ ಮತ್ತು ಲಯನ್ಸ್ ಕ್ಲಬ್ ಉಪ್ಪುಂದ-ಬೈಂದೂರು ಹಾಗೂ ಸಮೃದ್ಧ ಬೈಂದೂರು,ಎಸ್‍ಡಿಎಂಸಿ ವಲಯ ಬೈಂದೂರು ಅವರ ಸಹಭಾಗಿತ್ವದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಪೂರ್ವ ತಯಾರಿ ಕಾರ್ಯಕ್ರಮ ನಾವುಂದ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆಯಿತು.
ಲಯನ್ಸ್ ಕ್ಲಬ್ ನಾವುಂದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು,ಜೆ.ಸಿ ಉಪ್ಪುಂದ ಅಧ್ಯಕ್ಷ ಮಂಜುನಾಥ ದೇವಾಡಿಗ,ಲಯನ್ಸ್ ಕ್ಲಬ್ ಉಪ್ಪ್ಪಂದ-ಬೈಂದೂರು ಅಧ್ಯಕ್ಷ ಗಿರೀಶ್ ಶ್ಯಾನಭೋಗ,ಎಸ್‍ಡಿಎಂಸಿ ಬೈಂದೂರು ವಲಯಾಧ್ಯಕ್ಷ ಹರೀಶ್ಚಂದ್ರ ಆಚಾರ್ಯ,ನಾವುಂದ ಕ್ಲಬ್ಬ್ ಕಾರ್ಯದರ್ಶಿ ಅಶೋಕ ಆಚಾರ್ಯ,ನಾವುಂದ ಕಾಲೇಜಿನ ಪ್ರಿನ್ಸಿಪಾಲ್ ಶಶಿಕಲಾ,ಜೆ.ಸಿ ಮಹಿಳಾ ಅಧ್ಯಕ್ಷೆ ಸುಮಾ ಆಚಾರ್ಯ ಉಪಸ್ಥಿತರಿದ್ದರು.ಅಧ್ಯಾಪಕರಾದ ವಿಶ್ವನಾಥ ಗಾಯಾಡಿ ಪರೀಕ್ಷಾ ಪೂರ್ವ ತಯಾರಿ ಬಗ್ಗೆ ಮಾಹಿತಿಯನ್ನು ನೀಡಿದರು.ಹತ್ತನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.