ಅಡಿಕೆ ಕೃಷಿಯಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಂಡ-ಮಡ್ಲಗೇರಿ ಬಾಬು ಆಚಾರ್ಯ

Share

Advertisement
Advertisement
Advertisement

ಕುಂದಾಪುರ:ಬೈಂದೂರು ತಾಲೂಕಿನ ಹೇರೂರು ಗ್ರಾಮದ ಮಡ್ಲಗೇರಿ ನಿವಾಸಿಯಾದ ಬಾಬು ಆಚಾರ್ಯ ಅವರು ಬಿ.ಕಾಂ ಪದವೀಧರನಾಗಿದ್ದರೂ ಅವರ ಒಲವು ಮಾತ್ರ ಕೃಷಿ ಕ್ಷೇತ್ರದತ್ತ ಸೆಳೆದಿದೆ.ಕಳೆದ 30 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿರುವ ಅವರು ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡದೆ ಕೊಟ್ಟಿಗೆ ಗೊಬ್ಬರ,ಜೀವಾಮೃತ,ಎರೆಹುಳ ಗೊಬ್ಬರವನ್ನು ಉಪಯೋಗಿಸಿಕೊಂಡು ವಿನೂತನ ರೀತಿಯಲ್ಲಿ ತೋಟಗಾರಿಕೆ ಕೃಷಿಯನ್ನು ಮಾಡುತ್ತಾ ಜೀವನೋಪಾಯ ಕಂಡುಕೊಂಡಿದ್ದಾರೆ.
ತಮ್ಮ 5 ಎಕರೆ ಕೃಷಿ ಭೂಮಿಯಲ್ಲಿ ಅಡಿಕೆ,ಕಾಳು ಮೆಣಸು ಮತ್ತು ತೆಂಗಿನ ಕೃಷಿ ಮಾಡಿಕೊಂಡು ಆದಾಯವನ್ನು ಗಳಿಸುವುದರ ಮುಖೇನ ಸ್ವಾಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ.ಕೃಷಿ ತೋಟದ ರಚನೆ ಮಾಡುವವರಿಗೆ ಉಚಿತವಾಗಿ ಮಾಹಿತಿಯನ್ನು ನೀಡುವ ಅವರು ರೈತರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ತಮ್ಮದೆ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.

ಕೃಷಿ ಜತೆಗೆ ಮಣ್ಣಿನ ಫಲವತ್ತತೆ ಕಾಪಾಡಲು ಹೆಚ್ಚಿನ ಒತ್ತನ್ನು ನೀಡುತ್ತಿರುವ ಬಾಬು ಆಚಾರ್ಯ ಅವರು ರಾಸಾಯನಿಕ ಗೊಬ್ಬರವನ್ನು ಮಣ್ಣಿನ ಮೇಲೆ ಒಮ್ಮೆಯೂ ಪ್ರಯೋಗ ಮಾಡಿದ್ದೆ ಇಲ್ಲಾ.ಮಣ್ಣು ಇರುವ ವ್ಯವಸ್ಥೆ ಅಡಿಯಲ್ಲೆ ಕೃಷಿ ತೋಟವನ್ನು ಹೇಗೆ ರಚನೆ ಮಾಡಬಹುದು ಎನ್ನುವ ಬಗ್ಗೆ ಅಗಾಧವಾದ ಜ್ಞಾನವನ್ನು ಹೊಂದಿರುವ ಅವರು ಕೃಷಿ ತೋಟವನ್ನು ಮಾಡುವವರಿಗೆ ಉಚಿತವಾಗಿ ಮಾಹಿತಿಯನ್ನು ನೀಡುತ್ತಾರೆ.ಪ್ರಕೃತಿ ಕಾಪಾಡುವುದರ ಜತೆಗೆ ರೈತರ ಜೀವನ ಮಟ್ಟ ಸುದಾರಿಸಬೇಕ್ಕೆನ್ನುವುದು ಅವರ ಬಯಕೆ.


ಗ್ರಾಮೀಣ ಭಾಗದ ಜನರಿಗೆ ಶಿಕ್ಷಣವೆ ಮರಿಚಿಕೆ ಎನ್ನುವ ಕಾಲಘಟ್ಟದಲ್ಲಿ ಬಿ.ಕಾಂ ಶಿಕ್ಷಣವನ್ನು ಪೂರೈಸಿರುವ ಬಾಬು ಆಚಾರ್ಯ ಅವರು ಸರಕಾರಿ ಕೆಲಸಗಳನ್ನು ಧಿಕ್ಕರಿಸಿ ಕೃಷಿಯಲ್ಲಿ ಆಸಕ್ತಿಯಿಂದ ತೊಡಗಿಕೊಂಡಿದ್ದಾರೆ.ಪುತ್ತೂರು ಮತ್ತು ವಿಟ್ಲ ಭಾಗದಿಂದ ಒಣ ಅಡಿಕೆ ಬೀಜಗಳನ್ನು ತಂದು ಸ್ವತಹ ಗಿಡಗಳನ್ನು ತಯಾರು ಮಾಡುತ್ತಾರೆ.ವರ್ಷಕ್ಕೆ ಸರಿ ಸುಮಾರು 1.ಲಕ್ಷ.ಕ್ಕೂ ಅಧಿಕ ಅಡಿಕೆ ಗಿಡಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.ಊರು,ಪರ ಊರು ಸೇರಿದಂತೆ ಕೇರಳ ಇನ್ನಿತರ ರಾಜ್ಯಗಳಲ್ಲಿಯೂ ಬೇಡಿಕೆ ಇದೆ.ಮೋಹಿತ್ ನಗರ,ವಿಟ್ಲ ಮಂಗಳ,ಪುತ್ತೂರು ಮಂಗಳ,ಶ್ರೀಮಂಗಳ ಸೇರಿದಂತೆ ವಿವಿಧ ಜಾತಿಯ ಅಡಿಕೆ ಗಿಡಗಳು ಬಾಬು ಆಚಾರ್ಯ ಅವರ ಬಳಿ ಇದೆ.ವ್ಯಾಪಾರದ ದೃಷ್ಟಿಕೋನದಕ್ಕಿಂತಲೂ,ಆಸಕ್ತ ರೈತರಿಗೆ ಉತ್ತಮ ರೀತಿಯ ಅಡಿಕೆ ಗಿಡಗಳನ್ನು ನೀಡುವ ಉದ್ದೇಶದಿಂದ ಗಿಡಗಳನ್ನು ತಯಾರು ಮಾಡುತ್ತಿದ್ದೇನೆ ಆದಾಯದ ಗಳಿಕೆಯನ್ನು ನೋಡದೆ ಅತಿ ಕಡಿಮೆ ದರದಲ್ಲಿ ಗಿಡಗಳನ್ನು ಮಾರಾಟ ಮಾಡುತ್ತೇನೆ ನನ್ನ ಕೈಲಾದಷ್ಟು ರೈತರಿಗೆ ನೆರವು ನೀಡಬೇಕ್ಕುನ್ನುವುದು ತನ್ನ ಮೂಲ ಉದ್ದೇಶವಾಗಿದೆ ಎಂದು ಅವರು ಹೇಳುತ್ತಾರೆ.
ವರದಿ-ಜಗದೀಶ ದೇವಾಡಿಗ

Advertisement


Share

Leave a comment

Your email address will not be published. Required fields are marked *

You cannot copy content of this page