ಮನೆ ಕಂಪೌಂಡ್ ಕುಸಿತ,ಲಕ್ಷಾಂತರ.ರೂ ನಷ್ಟ

ಕುಂದಾಪುರ:ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚುಗೋಡು ಭಗತ್ ನಗರ ನಿವಾಸಿ ವಾಸುದೇವ ಖಾರ್ವಿ ಅವರ ಮನೆ ಹಿಂಭಾಗದ ಕಂಪೌಂಡ್ ಕುಸಿದ ಪರಿಣಾಮ ಮನೆ ಹಿಂಬದಿ ರೂಂ ಸಹಿತ ಒಂದು ಶೆಡ್ಡ್ ನೆಲಕ್ಕೆ ಉರುಳಿ ಬಿದ್ದು ಧಾರಾಶಯವಾಗಿದೆ.ಅವರ ಆರ್‍ಸಿಸಿ ಮನೆಗೆ ಭಾಗಶಃ ಹಾನಿ ಉಂಟಾಗಿದ್ದು ಅಂದಾಜು 10.ಲಕ್ಷ.ಕ್ಕೂ ಅಧಿಕ ನಷ್ಟ ಸಂಭವಿಸಿದ ಘಟನೆ ಶನಿವಾರ ನಡೆದಿದೆ.
ಜೂನ್ ಆರಂಭದಲ್ಲೆ ಚುರುಕುನಿಂದ ಕೂಡಿದ ಮಳೆ ಕಳೆದ ಮೂರು ದಿನಗಳಿಂದ ಜೋರಾಗಿ ಸುರಿಯುತ್ತಿದೆ.ಮಳೆ ಆರ್ಭಟಕ್ಕೆ ಕಂಚುಗೋಡು ಭಗತ್ ನಗರ ವಾಸುದೇವ ಖಾರ್ವಿ ಅವರ ಮನೆ ಕಂಪೌಂಡ್ ಕುಸಿದು ಬಿದ್ದು ಒಂದು ರೂಂ ಸಹಿತ,ಶೆಡ್ಡ್ ನೆಲಕ್ಕೆ ಉರುಳಿ ಬಿದ್ದಿದೆ.ಆರ್‍ಸಿಸಿ ಮನೆ ಬಿರುಕು ಬಿಟ್ಟಿದೆ.ಶೌಚಾಲಯ ಬೀಳುವ ಹಂತದಲ್ಲಿದೆ.ಸದ್ಯ ಮನೆಯವರು ಸಂಬಂಧಿಕರ ಮನೆಯಲ್ಲಿ ಆಶ್ರಯವನ್ನು ಪಡೆದಿದ್ದಾರೆ.ಘಟನಾ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಶೋಭಾ ಲಕ್ಷ್ಮೀ,ಆರ್.ಐ ರಾಘವೇಂದ್ರ,ಹೊಸಾಡು ವಿ.ಎ ಮಾಧವ ಕೊಠಾರಿ,ಉಗ್ರಾಣಿ ಕುಶಲ ಪೂಜಾರಿ,ಪಂಚಾಯಿತಿ ಸಿಬ್ಬಂದಿ ಶಿವನಂದಾ ಭೇಟಿ ಪರಿಶೀಲನೆ ನಡೆಸಿದರು.