ವಿದ್ಯಾರ್ಥಿಗಳಿಗೆ ಶಬ್ಧಕೋಶ ಪುಸ್ತಕ ವಿತರಣೆ

ಕುಂದಾಪುರ:ನಿವೃತ್ತ ಶಿಕ್ಷಕರಾದ ಸಂಪತ್‍ಕುಮಾರ್ ಪಾಂಗಾಳ ಅವರು ಸರಕಾರಿ ಹಿರಿಯ ಪ್ರಾಥಮಿಕ ಮೊವಾಡಿ ಶಾಲೆಯ ವಿದ್ಯಾಥಿಗಳಿಗೆ ಶಬ್ಧಕೋಶ ಪುಸ್ತಕವ್ನನು ಉಚಿತವಾಗಿ ವಿತರಿಸಿದರು.ತಾಲೂಕು ದೈಹಿಕ ಶಿಕ್ಷಣ ಪರೀವಿಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ,ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯಿನಿ ಜ್ಯೋತಿ ಸ್ವಾಗತಿಸಿದರು.ಸಹಶಿಕ್ಷಕಿ ಭಾಗೀರಥಿ ನಿರೂಪಿಸಿದರು. ಸಹಶಿಕ್ಷಕಿ ವತ್ಸಲಾ ವಂದಿಸಿದರು.

ರೈತರ ಮನವಿಯನ್ನು ಸ್ವೀಕರಿಸಿದಶಾಸಕ ಗುರುರಾಜ್ ಗಂಟಿಹೊಳೆ

ಕುಂದಾಪುರ:ಬೈಂದೂರು ವಿಧಾನಸಭೆ ಕ್ಷೇತ್ರದ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರ ಅಭಿವೃದ್ಧಿ ಕಾಮಗಾರಿ ಸಂದರ್ಭ ಕೈಗೊಂಡ ಚರಂಡಿ ಕಾಮಗಾರಿ ಅವ್ಯವಸ್ಥೆಯಿಂದ ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಹರಿದು ಬರುವ ನೀರು ತೋಡಿನ ಮೂಲಕ ಕೃಷಿ ಭೂಮಿಗಳತ್ತಾ ನುಗ್ಗುತ್ತಿದೆ ಚರಂಡಿ ದುರವಸ್ಥೆಯನ್ನು ಸರಿಪಡಿಸಿ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಹೊಸಾಡು ಗ್ರಾಮದ ರೈತರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಬುಧವಾರ ಮುಳ್ಳಿಕಟ್ಟೆಯಲ್ಲಿ ಮನವಿಯನ್ನು ನೀಡಿದರು.

You cannot copy content of this page