ಲಯನ್ಸ್ ಜಿಲ್ಲಾ ಗರ್ವನರ್ ಭೇಟಿ,ಸಾಧಕರಿಗೆ ಸನ್ಮಾನ

Share

Advertisement
Advertisement
Advertisement

ಕುಂದಾಪುರ:ಕಳೆದ ಐದು ವರ್ಷಗಳ ಅವಧಿಯಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚಿನ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ವಿಯೋಗ ಮಾಡುವುದರ ಮುಖೇನ ನಾವುಂದ ಲಯನ್ಸ್ ಕ್ಲಬ್ ಜನಾ ಸೇವಾ ಕಾರ್ಯದಲ್ಲಿ ತನ್ನನೆ ತಾನು ತೊಡಗಿಸಿ ಕೊಂಡಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಲಯನ್ಸ್ ಜಿಲ್ಲಾ ಗರ್ವನರ್ ಡಾ.ನೇರಿ ಕರ್ನೇಲಿಯೊ ಹೇಳಿದರು.
ನಾವುಂದ ಲಯನ್ಸ್ ಕ್ಲಬ್‍ಗೆ ಶನಿವಾರ ಅಧಿಕೃತವಾಗಿ ಭೇಟಿ ನೀಡಿದ ಅವರು ಅರೆಹೊಳೆ ಕ್ರಾಸ್ ನಾವುಂದ ಮಾಹಾಲಸ ಮಾಂಗಲ್ಯ ಆರ್ಕೇಡ್ ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಲಯನ್ಸ್ ಕ್ಲಬ್ ಪ್ರಮುಖರಾದ ಮಹಮ್ಮದ್ ಹನಿಫ್,ಸಪ್ನಾ ಸುರೇಶ,ಏಕನಾಥ ಬೋಳಾರ್,ಝೊನ್ ಚೆರ್‍ಪರ್ಸನ್ ಜಗದೀಶ ಶೆಟ್ಟಿ ಕುದ್ರುಕೋಡು,ಬೋಜರಾಜ ಶೆಟ್ಟಿ,ನಾವುಂದ ಕ್ಲಬ್ಬಿನ ಕೋಶಾಧಿಕಾರಿ ರಮೇಶ ಮೊಗವೀರ,ಕಾರ್ಯದರ್ಶಿ ಅಶೋಕ ಆಚಾರ್ಯ,ನರಸಿಂಹ ದೇವಾಡಿಗ ಮತ್ತು ಸದಸ್ಯರು ಉಪಸ್ಥಿತರಿದ್ದರು.ಸೌಪರ್ಣಿಕಾ ತ್ರೈಮಾಸಿಕ ಬುಲೆಟಿನ್ ಬಿಡುಗಡೆ ಮಾಡಲಾಯಿತು.ರಾಷ್ಟ್ರಮಟ್ಟದಲ್ಲಿ ಸಾಧನೆಗೈದಿರುವ ಆಲೂರು ಪ್ರೌಢಶಾಲೆ ವಿದ್ಯಾರ್ಥಿಗಳಾದ ಸಿಂಚನ ಶೆಟ್ಟಿ,ಗಿರಿಷ್ಮಾ,ಪ್ರಜ್ಞಾ ಹಾಗೂ ಆಯುರ್ವೇದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೆ ಸ್ಥಾನ ಪಡೆದ ರಶ್ಮಿ.ಆರ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.ಡಾ.ಮಹಮ್ಮದ್ ಹನಿಫ್ ಅವರು ನಾವುಂದ ಕೋಯಾನಗರ ಶಾಲಾ ಅಭಿವೃದ್ಧಿಗೆ 25,000.ರೂ ಅನುದಾನದ ಚೆಕ್ ನೀಡಿದರು.ಪ್ರದೀಪ್ ಶೆಟ್ಟಿ ಸ್ವಾಗತಿಸಿದರು.ಶಶಿಧರ ಶೆಟ್ಟಿ ನಿರೂಪಿಸಿದರು,ಅಶೋಕ ಆಚಾರ್ಯ ವರದಿ ವಾಚಿಸಿದರು.ಸುಮಾರು 1.65 ಲಕ್ಷ.ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ನಾವುಂದ ನಾಗಯ್ಯ ಶೆಟ್ಟಿ ಪ್ರಯಾಣಿಕರ ತಂಗುದಾಣವನ್ನು ಗುಲಾಬಿ ಶೆಟ್ಟಿ ಅವರು ಉದ್ಘಾಟಿಸಿದರು.ಅವರನ್ನು ನಾವುಂದ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಸುದ್ದಿಗಳನ್ನು ನಮ್ಮ ಜಾಲಾತಾಣದಲ್ಲಿ ಪ್ರಕಟಿಸಲು ಈ ನಂಬರ್‍ಗೆ ವಾಟ್ಸ್‍ಆಪ್ ಮಾಡಿ-9141825696

Advertisement


Share

Leave a comment

Your email address will not be published. Required fields are marked *

You cannot copy content of this page