ಸೀಮೆಎಣ್ಣೆ ಮೇಲಿನ ಸಬ್ಸಿಡಿ ಹೆಚ್ಚಿಸುವಂತೆ ಆಗ್ರಹ

Share

Advertisement
Advertisement
Advertisement

ಕುಂದಾಪುರ:ಸಬ್ಸಿಡಿ ರೂಪದಲ್ಲಿ ನೀಡುತ್ತಿರುವ ವೈಟ್ ಸೀಮೆಎಣ್ಣೆ ದುಬಾರಿಯಾಗಿದ್ದು ಮೀನುಗಾರರಿಗೆ ಹೊರೆಯಾಗಿ ಪರಿಣಮಿಸಿದೆ.ಮೀನುಗಾರರ ಮೇಲಿನ ಹಿತಾಶಕ್ತಿಯಿಂದ ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕ್ಕುನ್ನುವುದು ಕರಾವಳಿ ಭಾಗದ ಮೀನುಗಾರರ ಆಗ್ರಹ.
ಯಾವುದೆ ರೀತಿ ಸೂಚನೆಯನ್ನು ನೀಡದ ಕೇಂದ್ರ ಸರಕಾರ ಬ್ಲೂ ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನು ಇತ್ತೀಚೆಗೆ ತೆಗೆದು ಹಾಕಿದೆ.ಅತ್ಯಂತ ದಹನ ಶೀಲತೆಯನ್ನು ಹೊಂದಿರುವ ಬ್ಲೂ ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ತೆಗೆದು ಹಾಕಿರುವುದರಿಂದ ಬ್ಲೂ ಸೀಮೆಎಣ್ಣೆಯನ್ನು ಮಾರುಕಟ್ಟೆ ದರದಲ್ಲೆ ಖರೀದಿಸಬೇಕು.ಸಬ್ಸಿಡಿ ರೂಪದಲ್ಲಿ ವಿತರಿಸುತ್ತಿರುವ ವೈಟ್ ಸೀಮೆ ಎಣ್ಣೆ ಬ್ಲೂ ಸೀಮೆಎಣ್ಣೆ ಗಿಂತ 10.ರೂ ದುಬಾರಿ.
ಖನಿಜ ತೈಲದಿಂದ ಪಡೆಯಲಾಗುವ ಸೀಮೆ ಎಣ್ಣೆಯನ್ನು (ಹೈಡ್ರೊಕಾರ್ಬನ್ ದ್ರವ) ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಕೈಗಾರಿಕೆ ಜೊತೆಗೆ ಮನೆಗಳಲ್ಲಿ ಅಡುಗೆ ಮತ್ತು ದೀಪದ ಇಂಧನವಾಗಿ ಮಾತ್ರವಲ್ಲದೆ ಮೋಟರ್‍ಗಳ ಚಲನೆಗೆ ಪ್ರಮುಖ ಇಂಧನವನ್ನಾಗಿ ಬಳಸಲಾಗುತ್ತದೆ.ಗ್ರಹ ಬಳಕೆಗಾಗಿ ಹಾಗೂ ಮೀನುಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ರೇಷನ್ ಪದ್ಧತಿಯಲ್ಲಿ ಭಾರತ ಸರಕಾರ ಈ ಹಿಂದೆ ಸಬ್ಸಿಡಿ ರೂಪದಲ್ಲಿ ಬ್ಲೂ ಸೀಮೆಎಣ್ಣೆಯನ್ನು ಪೂರೈಕೆ ಮಾಡುತ್ತಿತ್ತು.
ಸೀಮೆಎಣ್ಣೆ ಮೇಲಿನ ಸಬ್ಸಿಡಿ ಹೆಚ್ಚಳಕ್ಕೆ ಆಗ್ರಹ:ಬ್ಲೂ ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರಕಾರ ತೆಗೆದು ಹಾಕಿದ್ದರಿಂದ ಪ್ರಸ್ತುತ ರಾಜ್ಯ ಸರಕಾರ ಸಬ್ಸಿಡಿ ರೂಪದಲ್ಲಿ ವೈಟ್ ಸೀಮೆಎಣ್ಣೆಯನ್ನು ನೀಡುತ್ತಿದೆ.ಬ್ಲೂ ಸೀಮೆಎಣ್ಣೆ ಕ್ಕಿಂತ ವೈಟ್ ಸೀಮೆಎಣ್ಣೆ ದುಬಾರಿಯಾಗಿರುವುದರಿಂದ ಮೀನುಗಾರರಿಗೆ ಹೊರೆಯಾಗಿದೆ.ಅನಿವಾರ್ಯ ಕಾರಣದಿಂದ ಲೀಟರ್ ಮೇಲೆ ಹೆಚ್ಚುವರಿಯಾರಿ 10.ರೂ ನೀಡಿ ಕೊಂಡುಕೊಳ್ಳಬೇಕು.ಮೀನಿನ ಇಳುವರಿ ಕುಂಠಿತ,ಪ್ರತಿಕೂಲ ಹಾವಾಮಾನದಿಂದ ಕಂಗೆಟ್ಟಿರುವ ಮೀನುಗಾರರು ತೈಲ ದರದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.ಪ್ರಸ್ತುತ ನೀಡುತ್ತಿರುವ ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನು ಕನಿಷ್ಠ 10.ರೂ ಏರಿಕೆ ಮಾಡುವಂತೆ ಮೀನುಗಾರರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.ಹಿಂದೆ ರೇಷನ್ ವ್ಯವಸ್ಥೆಯಡಿಯಲ್ಲಿ ನೀಡುತ್ತಿದ್ದ ಬ್ಲೂ ಸೀಮೆಎಣ್ಣೆ ಕಡಿಮೆ ದರದಲ್ಲಿ ಮೀನುಗಾರರಿಗೆ ದೊರಕುತ್ತಿತ್ತು.
ಮೋಟರ್ ಇಂಜಿನ್ ಖರೀದಿಸಲು ಸಬ್ಸಿಡಿ ಹಣ ಘೋಷಣೆ:ಬ್ಲೂ ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನು ತೆಗೆದು ಹಾಕಿದ ಬಳಿಕ ಕೇಂದ್ರ ಸರಕಾರ ಮೀನುಗಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಪೆಟ್ರೋಲ್ ಚಾಲಿತ ಮೋಟರ್ ಇಂಜಿನ್ ಬಳಕೆ ಮಾಡುವಂತೆ ಉತ್ತೇಜಿಸಿ ವಿಶೇಷವಾದ ಯೋಜನೆಗಳನ್ನು ಘೋಷಿಸಿದೆ.ಪೆಟ್ರೋಲ್ ಚಾಲಿತ ಮೋಟರ್ ಇಂಜಿನ್‍ಅನ್ನು ಖರೀದಿಸುವ ಫಲಾನುಭವಿ ಮೀನುಗಾರರಿಗೆ ಸರಕಾರ ಘೋಷಣೆ ಮಾಡಿರುವಂತೆ 50,000.ರೂ ಸಬ್ಟಿಡಿ ಹಣ ದೊರಕಲಿದೆ.ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಮೀನುಗಾರರು ಅರ್ಜಿಯನ್ನು ಹಾಕಬೇಕು.
ಪೆಟ್ರೋಲ್ ಚಾಲಿತ ಮೋಟರ್ ಇಂಜಿನ್ ಬಳಕೆ ಮೇಲೆ ನಿರಾಶಕ್ತಿ:ಪೆಟ್ರೋಲ್ ಚಾಲಿತ ಮೋಟರ್ ಇಂಜಿನ್ ಓಡಿಸಲು ಸರಿ ಸುಮಾರು 1 ಲೀಟರ್ ಪೆಟ್ರೋಲ್‍ಗೆ 300 ಮೀಲಿ ತೈಲ ಮಿಶ್ರಣ ಮಾಡಬೇಕು.ಲೀಟರ್ ಒಂದರ ಮೇಲಿನ ವೆಚ್ಚ ಅಂದಾಜು 162.ರೂ ತಗಲುತ್ತದೆ ಎಂದು ಮೀನುಗಾರರು ಹೇಳುತ್ತಾರೆ.ಪೆಟ್ರೋಲ್‍ಗೆ ಯಾವುದೇ ರೀತಿಯ ಸಬ್ಸಿಡಿ ಸರಕಾರ ನೀಡದೆ ಇರುವುದರಿಂದ ಇದು ಮೀನುಗಾರರಿಗೆ ಹೊರೆ ಆಗಲಿದೆ.ಇಂಜಿನ್ ಖರೀದಿಗೆ ಸರಕಾರ 50,000.ರೂ ಹಣ ನೀಡಿದ್ದರು.ಪೆಟ್ರೋಲ್ ಚಾಲಿತ ಮೋಟರ್ ಇಂಜಿನ್ ಖರೀದಿಗೆ ಮೀನುಗಾರರು ನಿರಾಶಕ್ತಿ ತೋರಿಸುತ್ತಿದ್ದಾರೆ.ಸೀಮೆಎಣ್ಣೆ ಮತ್ತು ಪೆಟ್ರೋಲ್ ದರ ಅಜಗಜಾಂತರ ವ್ಯತ್ಯಾಸವಿರುವುದೆ ಕಾರಣವಾಗಿದೆ.

Advertisement


Share

Leave a comment

Your email address will not be published. Required fields are marked *

You cannot copy content of this page