ಶ್ರೀಬೊಬ್ಬರ್ಯ ದೇವರಿಗೆ ಬೆಳ್ಳಿ ಮುಖವಾಡ ಸಮರ್ಪಣೆ

ಬೈಂದೂರು:ತಾಲೂಕಿನ ನಾವುಂದ ಗ್ರಾಮದ ಸಪರಿವಾರ ಶ್ರೀಪದ್ಮಾವತಿ ಅಮ್ಮನವರ ಪುಷ್ಠಿ ಮಹೋತ್ಸವ ಕಾರ್ಯಕ್ರಮ ಮತ್ತು ಶ್ರೀಬೊಬ್ಬರ್ಯ ದೇವರಿಗೆ ಬೆಳ್ಳಿ ಮುಖವಾಡ ಸಮರ್ಪಣೆ ಹಾಗೂ ಶ್ರೀನಾಗ ದೇವರಿಗೆ ಆಶ್ಲೇಷಾ ಬಲಿ,ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬುಧವಾರ ನಡೆಯಿತು. ಶ್ರೀಪದ್ಮಾವತಿ ಅಮ್ಮನವರಿಗೆ ಪರಿಕಲಶಾಭಿಷೇಕ,ಪುಷ್ಠಿ ವರ್ಧಂತ್ಯುತ್ಸವ,ಬ್ರಹ್ಮ ಕಲಶಾಭಿಷೇಕ,ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.