ಸಮುದ್ರದಲ್ಲಿ ಛದ್ರಗೊಂಡ ಮೀನುಗಾರಿಕಾ ಬೋಟ್

ಗಂಗೊಳ್ಳಿ:ಭಟ್ಕಳ ತಾಲೂಕಿನ ವ್ಯಾಪ್ತಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಮಯದಲ್ಲಿ ಅಪಘಾತಕ್ಕೆ ಈಡಾಗಿದ್ದ ಮಾಲ್ತೀದೇವಿ-2 ಎನ್ನುವ ಬೋಟ್ ಗಂಗೊಳ್ಳಿ ಸಮುದ್ರ ಕಿನಾರೆಯಲ್ಲಿ ಅಲೆಗಳ ಹೊಡೆತಕ್ಕೆ ಮಂಗಳವಾರ ಛದ್ರಗೊಂಡಿದೆ.ಬೋಟ್‍ನ ಪ್ರಮುಖ ಭಾಗಗಳು ಸಮುದ್ರ ಪಾಲಾಗಿದೆ.
ಮೇ.16 ರಂದು ಮಲ್ಪೆಯಿಂದ ಭಟ್ಕಳ ಭಾಗಗಕ್ಕೆ ಮೀನುಗಾರಿಕೆಗೆ ತೆರಳಿದ್ದ ಮಾಲ್ತೀ ದೇವಿ-2 ಎನ್ನುವ ಬೋಟ್‍ಗೆ ಮೇ.17 ರಂದು ಬೆಳಗಿನ ಜಾವಾ 5 ಗಂಟೆ ಸುಮಾರಿಗೆ ಅದೆ ಜಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದುರ್ಗಾ ಎನ್ನುವ ಬೋಟ್ ಡಿಕ್ಕಿ ಹೊಡೆದಿದೆ.ಅಪಘಾತಕ್ಕೆ ಈಡಾಗಿದ್ದ ಬೋಟ್‍ನ್ನು ಪಾಂಚಜನ್ಯ ಹಾಗೂ ದುರ್ಗಾ ಎನ್ನುವ ಬೋಟ್‍ನ ಸಹಾಯದಿಂದ ಕಚೇರಿಗೆ ಕಟ್ಟಲೆಂದು ಗಂಗೊಳ್ಳಿ ಸಮೀಪ ಕರೆಗೆ ತರುವಾಗ ಗಂಗೊಳ್ಳಿ ಅಳಿವೆ ಯಿಂದ ಸುಮಾರು 10 ಮಾರು ದೂರದಲ್ಲಿ ಮಾಲ್ತೀ ದೇವಿ-2 ಬೋಟ್‍ನ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಿ ಹೋಗಿತ್ತು.ವಿಶೇಷ ಕಾರ್ಯಾಚರಣೆ ಮೂಲಕ ಬೋಟ್‍ನ್ನು ಸುರಕ್ಷಿತವಾಗಿ ದಡಕ್ಕೆ ತರಬೇಕ್ಕೆನ್ನುವ ಪ್ರಯತ್ನ ವಿಫಲವಾಗಿದ್ದು.ಹವಾಮಾನ ವೈಪರಿತ್ಯದಿಂದಾಗಿ ಸಮುದ್ರದಲ್ಲಿ ಅಲೆಗಳ ಅಬ್ಬರ ಅಧಿಕವಾಗಿದ್ದ ಕಾರಣ.ಅಲೆಗಳ ಹೊಡೆತಕ್ಕೆ ಬೋಟ್ ಛದ್ರಗೊಂಡಿದೆ.
ಡಿಸೇಲ್ ಟ್ಯಾಂಕ್ ಸಮುದ್ರ ಪಾಲು:ದುರಂತದಲ್ಲಿ ಬೋಟ್‍ನಲ್ಲಿದ್ದ 2,500 ಲೀಟರ್ ತುಂಬಿದ್ದ ಡಿಸೇಲ್ ಟ್ಯಾಂಕ್ ಸಮುದ್ರ ಪಾಲಾಗಿದೆ.ಸಮದ್ರದಲ್ಲಿ ಡಿಸೇಲ್ ಸೋರಿಕೆ ಆಗುವ ಭೀತಿ ಎದುರಾಗಿದೆ.ಬೋಟ್ ದುರಂತದಲ್ಲಿ ಮಾಲೀಕರಿಗೆ 20 ಲಕ್ಷ.ಕ್ಕೂ ಅಧಿಕ ನಷ್ಟ ಉಂಟಾಗಿದೆ.