ವಿಶ್ವ ಪರಿಸರ ದಿನಾಚರಣೆ,ಸನ್ಮಾನ ಕಾರ್ಯಕ್ರಮ

ಕುಂದಾಪುರ:ಜೆಸಿಐ ಕುಂದಾಪುರ ಸಿಟಿ ಹಾಗೂ ಪ್ರಕೃತಿ ಇಕೋ ಕ್ಲಬ್ ಜನತಾ ಪ್ರೌಢಶಾಲೆ ಹೆಮ್ಮಾಡಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಹೆಮ್ಮಾಡಿ ಜನತಾ ಪ್ರೌಢಶಾಲೆಯಲ್ಲಿ ಗುರುವಾರ ನಡೆಯಿತು.
ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ರಾಘವೇಂದ್ರ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.ಜನತಾ ಪ್ರೌಢ ಶಾಲೆ ಹೆಮ್ಮಾಡಿ ಮುಖ್ಯೋಪಾಧ್ಯಾಯರಾದ ಮಂಜು ಕಾಳವಾರ ಉದ್ಘಾಟಿಸಿದರು.ಜೆಸಿಐ ಕುಂದಾಪುರ ಸಿಟಿ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಗಿಡಗಳನ್ನು ವಿತರಿಸಿದರು.ಶ್ರೀಧರ ಗಾಣಿಗ ಅವರು ಪರಿಸರ ಕಾಳಜಿ ಕುರಿತು ಮಾಹಿತಿಯನ್ನು ನೀಡಿದರು.ಬೈಂದೂರು ವಲಯದ ಬೀಟ್ ಅರಣ್ಯಾಧಿಕಾರಿ ಶಂಕರ್ ಡಿ.ಎಲ್ ಅವರನ್ನು ಸನ್ಮಾನಿಸಲಾಯಿತು.ಜೆಸಿಐ ಕುಂದಾಪುರ ಸಿಟಿ ಪೂರ್ವಾಧ್ಯಕ್ಷ ವಿಜಯ್ ಬಂಡಾರಿ,ಅಕ್ಷಯ್ ಹೆಮ್ಮಾಡಿ,ಇಕೋ ಕ್ಲಬ್ ಸಂಚಾಲಕ ಮಹೇಂದ್ರ ದೇವಾಡಿಗ ಉಪಸ್ಥಿತರಿದ್ದರು.ಅಧ್ಯಾಪಕ ವಿಠಲ್ ನಾಯ್ಕ್ ಸ್ವಾಗತಿಸಿದರು.ಜೆಸಿಐ ಕುಂದಾಪುರ ಸಿಟಿ ಕಾರ್ಯದರ್ಶಿ ಶಿಕ್ಷಕ ಜಗದೀಶ್ ಶೆಟ್ಟಿ ನಿರೂಪಿಸಿ,ವಂದಿಸಿದರು.