ಸಾರ್ವಜನಿಕ ಅಭಿನಂದನಾ ಸಮಾರಂಭ ಕಾರ್ಯಕ್ರಮ

ಕುಂದಾಪುರ:ಆಲೂರು ಹರ್ಕೂರು ಗ್ರಾಮಸ್ಥರ ವತಿಯಿಂದ ಅಭಿನಂದನಾ ಸಮಾರಂಭ ಕಾರ್ಯಕ್ರಮ ಆಲೂರು ಮೂಕಾಂಬಿಕಾ ಸಭಾಭವನದಲ್ಲಿ ಬುಧವಾರ ನಡೆಯಿತು.ಆಲೂರು ಪಂಚಾಯಿತಿ ಅಧ್ಯಕ್ಷ ರಾಜೇಶ್ ಎನ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.ಆಲೂರು ಮಹಾಬಲ ಜೋಯಿಸ್,ಆಲೂರು ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಚ್.ಮಂಜಯ್ಯ ಶೆಟ್ಟಿ,ಶಾಖಾಧಿಕಾರಿ ಸಂಜೀವ ಪೂಜಾರಿ,ಅಪ್ಪು ಕುಲಾಲ್,ತೇಜಪ್ಪ ಶೆಟ್ಟಿ,ರವಿ ಶೆಟ್ಟಿ ಆಲೂರು,ಸತೀಶ ಶೆಟ್ಟಿ,ಪ್ರಶಾಂತ ಕುಲಾಲ್,ಅರುಣ ಶೆಟ್ಟಿ,ಕೃಷ್ಣ ಶೆಟ್ಟಿ,ವಾಸುದೇವ ಶ್ಯಾನುಭಾಗ್,ರಾಘವೇಂದ್ರ ದೇವಾಡಿಗ,ಸಂತೋಷ ಪೂಜಾರಿ ಉಪಸ್ಥಿತರಿದ್ದರು.ನಿವೃತ್ತ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಟೆಂಡರ್ ಆಗಿ ಸೇವೆ […]

ಬಾವಿಗೆ ಕಾಲು ಜಾರಿ ಬಿದ್ದು ಕೃಷಿಕ ಸಾವು

ಕುಂದಾಪುರ:ಬೈಂದೂರು ತಾಲೂಕಿನ ಬಡಾಕೆರೆ ಗ್ರಾಮದ ಪೋಸ್ಟ್ ನಿವಾಸಿ ಕೃಷಿಕ ಮಂಜುನಾಥ ಶೇಟ್ (85) ಎಂಬುವವರು ತೆಂಗಿನ ತೋಟದಲ್ಲಿ ತೆಂಗಿನಕಾಯಿ ಹೆಕ್ಕಲು ಹೋದಂತಹ ಸಮಯದಲ್ಲಿ ಬಾವಿ ಬದಿಯಲ್ಲಿ ಬಿದ್ದಿರುವ ತೆಂಗಿನಕಾಯಿಯನ್ನು ಹೆಕ್ಕುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.ಮಂಜುನಾಥ ಶೇಟ್ ಅವರು ಬೆಳಗಿನ ಸಮಯದಲ್ಲಿ ತೆಂಗಿನ ತೋಟಕ್ಕೆ ಹೋಗಿ ತೋಟದಲ್ಲಿ ಬಿದ್ದಿರುವ ಕಾಯಿಯನ್ನು ಹೆಕ್ಕುವ ಅಭ್ಯಾಸವನ್ನು ಇಟ್ಟುಕೊಂಡಿದ್ದರು.ದಿನ ನಿತ್ಯದ ರೂಢಿಯಂತೆ ಬುಧವಾರ ಬೆಳಗಿನ ಸಮಯದಲ್ಲಿ ತೋಟಕ್ಕೆ ಕಾಯಿಯನ್ನು ಹೆಕ್ಕಲು ಮನೆಯಿಂದ […]

You cannot copy content of this page