ಬಡಾಕೆರೆ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಕಾರ್ತಿಕ ಮಾಸದ ದೀಪೋತ್ಸವ

ಬೈಂದುರು:ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಡಾಕೆರೆ
ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ಸಣ್ಣಕಳ್ಳಿ ಮನೆ ಕುಟುಂಬಸ್ಥರು ಹಾಗೂ ಊರಿನ ಗ್ರಾಮಸ್ಥರ ಸಯೋಗದೊಂದಿಗೆ ವೈಭವದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಬುಧವಾರ ಸಂಭ್ರಮದಿಂದ ನಡೆಯಿತು.ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದ ಸುತ್ತಲೂ ಹೂವಿನ ಅಲಂಕಾರ ಮಾಡಲಾಯಿತು ಹಾಗೂ ವಿದ್ಯುತ್ ದೀಪಾಗಳಿಂದ ಸಿಂಗಾರಿಸಲಾಯಿತು,ಹಣತೆ ದೀಪಗಳನ್ನು ಹಚ್ಚಲಾಗಿತ್ತು.ದೇವಸ್ಥಾನದ ಪ್ರಧಾನ ಅರ್ಚಕರಾದ ಮಹಾಬಲೇಶ್ವರ ಹೊಳ್ಳ ವಕ್ಕೇರಿ ಬಡಾಕೆರೆ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಸಾನಿಧ್ಯದಲ್ಲಿ ಸಂಪನ್ನಗೊಂಡಿತ್ತು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಶ್ರೀ ರಾಮ ಭಜನಾ ಮಂಡಳಿ ಸದಸ್ಯರು ಸೇವಾರ್ಥಿಗಳ ಕುಟುಂಬಸ್ಥರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.